ಕರ್ನಾಟಕ

karnataka

ETV Bharat / sports

ಕ್ರಿಕೆಟ್​ಗೆ ವಿದಾಯ ಹೇಳಿದ ಸ್ವಿಂಗ್​ ಕಿಂಗ್​​​​... 17 ವರ್ಷದ ಕ್ರಿಕೆಟ್​ಗೆ ತೆರೆ ಎಳೆದ ಇರ್ಫಾನ್​ ಪಠಾಣ್​!

2007ರ ಟಿ-20 ವಿಶ್ವಕಪ್​​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆಲ್​ರೌಂಡರ್​ ಇರ್ಫಾನ್​ ಪಠಾಣ್​​ ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ.

Irfan Pathan retires from all forms of cricket
17 ವರ್ಷದ ಕ್ರಿಕೆಟ್​ಗೆ ತೆರೆ ಎಳೆದ ಇರ್ಫಾನ್​ ಪಠಾಣ್

By

Published : Jan 4, 2020, 5:47 PM IST

ಬರೋಡ್​​:ಟೀಂ ಇಂಡಿಯಾದ ಸ್ವಿಂಗ್​ ಕಿಂಗ್​​ ಎಂದು ಖ್ಯಾತಿ ಗಳಿಸಿದ್ದ ಹಿರಿಯ ಆಲ್​ರೌಂಡರ್​ ಇರ್ಫಾನ್ ಪಠಾಣ್​ ಎಲ್ಲ ಮಾದರಿ ಕ್ರಿಕೆಟ್​ಗೆ ದಿಢೀರ್​ ವಿದಾಯ ಘೋಷಣೆ ಮಾಡಿದ್ದಾರೆ.

ಕ್ರಿಕೆಟ್​ಗೆ ವಿದಾಯ ಹೇಳಿದ ಸ್ವಿಂಗ್​ ಕಿಂಗ್

2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​​ ಸರಣಿಯೊಂದಿಗೆ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಈ ಪ್ಲೇಯರ್​ 2012ರ ಟಿ-20 ಕ್ರಿಕೆಟ್​​ ವಿಶ್ವಕಪ್​​ನಲ್ಲಿ ಕೊನೆಯದಾಗಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.

19 ವರ್ಷದವರಿಂದಾಗಲೇ ತಂಡಕ್ಕೆ ಸೇರಿಕೊಂಡಿದ್ದ ಈ ಪ್ಲೇಯರ್​ ಒಟ್ಟು 17 ವರ್ಷದ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ 301 ವಿಕೆಟ್​ ಪಡೆದುಕೊಂಡಿದ್ದಾರೆ.

2007ರ ಟಿ-20 ವಿಶ್ವಕಪ್​​ನಲ್ಲಿ ಅಮೋಘ ಪ್ರದರ್ಶನ

2006ರಲ್ಲಿ ಕರಾಚಿಯಲ್ಲಿ ಪಾಕ್​ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದ ಮೊದಲ ಓವರ್​​ನಲ್ಲೇ ಸಲ್ಮಾನ್​ ಭಟ್​, ಯೂನಿಸ್​ ಖಾನ್​ ಹಾಗೂ ಮೊಹಮ್ಮದ್​ ಯುಸೂಫ್​ ವಿಕೆಟ್​ ಪಡೆದು ಮೊದಲ ಓವರ್​​ನಲ್ಲೇ ಭಾರತದ ಪರ ಹ್ಯಾಟ್ರಿಕ್​ ಪಡೆದ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜತೆಗೆ 2007ರಲ್ಲಿ ನಡೆದ ಚೊಚ್ಚಲ ಟಿ-20 ವಿಶ್ವಕಪ್​​ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಇರ್ಫಾನ್ ಪಠಾಣ್​ 29 ಟೆಸ್ಟ್​​ ಪಂದ್ಯಗಳಿಂದ 100 ವಿಕೆಟ್​, 1 ಶತಕ ಹಾಗೂ 6 ಅರ್ಧಶತಕ ಸೇರಿ 1105 ರನ್​, 120 ಏಕದಿನ ಪಂದ್ಯಗಳಿಂದ 173 ವಿಕೆಟ್​​​, 5 ಅರ್ಧಶತಕ ಸೇರಿ 1544 ರನ್​ ಹಾಗೂ 24 ಟಿ-20 ಪಂದ್ಯಗಳಿಂದ 28 ವಿಕೆಟ್​​ ಸೇರಿ 172ರನ್​ಗಳಿಕೆ ಮಾಡಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೀ ಕಿಂಗ್ಸ್​ ಪಂಜಾಬ್​, ಡೆಲ್ಲಿ,ರೈಸಿಂಗ್​ ಪುಣೆ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಗುಜರಾತ್​ ತಂಡದ ಪರ ಆಟವಾಡಿದ್ದು, ರಣಜಿಯಲ್ಲಿ ಬರೋಡ್​ ಹಾಗೂ ಜಮ್ಮು-ಕಾಶ್ಮೀರ ತಂಡವನ್ನ ಪ್ರತಿನಿಧಿಸುತ್ತಿದ್ದರು.

ABOUT THE AUTHOR

...view details