ರಾಯ್ಪುರ್:ರೋಡ್ ಸೇಫ್ಟಿ ವರ್ಲ್ಡ್ ಕ್ರಿಕೆಟ್ ಸಿರೀಸ್ನಲ್ಲಿ ಭಾಗಿಯಾಗಲು ರಾಯ್ಪುರ್ನಲ್ಲಿರುವ ಟೀಂ ಇಂಡಿಯಾ ಮಾಜಿ ಪ್ಲೇಯರ್ ಇರ್ಫಾನ್ ಪಠಾಣ್ ಇದೀಗ ಛತ್ತೀಸ್ಗಢ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ಗಢ ಕ್ರಿಕೆಟ್ಗೆ ಉತ್ತಮ ಕೋಚ್ ಅಗತ್ಯವಿದೆ ಎಂದು ಹೇಳಿರುವ ಅವರು, ಉತ್ತಮ ತಂಡ ರೂಪುಗೊಳ್ಳಲು ಹೊಸ ತರಬೇತುದಾರನಿಗೆ ಕನಿಷ್ಠ 2 ವರ್ಷಗಳ ಸಮಯ ನೀಡಬೇಕಾಗುತ್ತದೆ ಎಂದಿದ್ದಾರೆ.
ಇಂಡಿಯಾ ಲೆಜೆಂಡ್ಸ್ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಸಂಜೆ 7 ಗಂಟೆಗೆ ಪಂದ್ಯ ಆಯೋಜನೆಗೊಂಡಿದೆ. ಪಂದ್ಯಕ್ಕೂ ಮುಂಚಿತವಾಗಿ ನಡೆದ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಛತ್ತೀಸ್ಗಢದಲ್ಲಿ ಕ್ರಿಕೆಟ್ಗೆ ಉತ್ತಮ ಸೌಲಭ್ಯವಿದೆ. ಆದರೆ ಆಟಗಾರನಿಗೆ ಉತ್ತಮ ಕೋಚ್ ಅವಶ್ಯಕತೆ ಇರುತ್ತದೆ. ಅದರ ಅವಶ್ಯಕತೆ ಇಲ್ಲಿನ ಕ್ರಿಕೆಟ್ ಅಸೋಸಿಯೇಷನ್ಗಿದೆ ಎಂದಿದ್ದಾರೆ.