ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಆಯೋಜನೆ ಮಾಡುತ್ತಿರುವ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಟಗಾರರ ವೇತನ ಬಹಿರಂಗಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ವಿಂಡೀಸ್ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಇಬ್ಬರ ವೇತನ ಸಮವಾಗಿದೆ ಎಂಬ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.
ಎಲ್ಪಿಎಲ್ನಲ್ಲಿ 5 ತಂಡಗಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಲಂಕಾ ಪ್ರತಿನಿಧಿಸುತ್ತಿರುವ ಹಾಗೂ ಎಲ್ಪಿಎಲ್ ತಂಡಗಳ ನಾಯಕರಿಗೆ 60,000 ಯುಎಸ್ ಡಾಲರ್ ( ಸುಮಾರು 44.32 ಲಕ್ಷ ರೂ) ನೀಡುತ್ತಿದೆ. ದ್ವಿತೀಯ ವಿಭಾಗದ ಆಟಗಾರರಿಗೆ 50, 000 ಯುಎಸ್ ಡಾಲರ್( ಸುಮಾರು 36.93 ಲಕ್ಷ ರೂ) ಹಾಗೂ ಮೂರನೇ ವರ್ಗದ ಆಟಗಾರರಿಗೆ 40,000 ಯುಎಸ್ ಡಾಲರ್(ಸುಮಾರು 29.55 ಲಕ್ಷ ರೂ) ನೀಡುತ್ತಿದೆ.
ಇದರ ಪ್ರಕಾರ ದಾಸುನ್ ಶನಕ, ಕುಸಲ್ ಪೆರೆರಾ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ 60 ಸಾವಿರ ಯುಎಸ್ಡಿ, ವಿದೇಶಿ ಸ್ಟಾರ್ ಆಟಗಾರರಾದ ರಸೆಲ್, ಇರ್ಫಾನ್ ಪಠಾಣ್, ಶಾಹೀದ್ ಅಫ್ರಿದಿ, ಡೇಲ್ ಸ್ಟೈನ್ ಜೊತೆಗೆ ಲಂಕಾ ಆಟಗಾರರಾದ ಡಿಸಿಲ್ವ, ಹಸರಂಗ 50 ಸಾವಿರ ಯುಎಸ್ಡಿ ಪಡೆಯುತ್ತಿದ್ದಾರೆ.