ಕರ್ನಾಟಕ

karnataka

ETV Bharat / sports

ಇರ್ಪಾನ್ ಪಠಾಣ್​ ಅಬ್ಬರ... ಶ್ರೀಲಂಕಾ ಲೆಜೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ - ​ ಭಾರತ ಲೆಜೆಂಡ್​ ತಂಡಕ್ಕೆ 5 ವಿಕೆಟ್​ಗಳ ಜಯ

ಇರ್ಪಾನ್​ ಪಠಾಣ್​ ಆಲ್​ರೌಂಡರ್ ಆಟ ಹಾಗೂ ಮುನಾಫ್ ಪಟೇಲ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ಲೆಜೆಂಡ್​ ತಂಡ ಶ್ರೀಲಂಕಾ ಲೆಜೆಂಡ್​ ವಿರುದ್ಧ 5 ವಿಕೆಟ್​​ಗಳ ಜಯ ಸಾಧಿಸಿದೆ.

Road Safety World Series
ರೋಡ್​ಸೇಫ್ಟಿ ಟೂರ್ನಮೆಂಟ್​ ​

By

Published : Mar 11, 2020, 3:04 AM IST

ಮುಂಬೈ: ಇರ್ಪಾನ್​ ಪಠಾಣ್​ ಆಲ್​ರೌಂಡರ್ ಆಟ ಹಾಗೂ ಮುನಾಫ್ ಪಟೇಲ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ಲೆಜೆಂಡ್​ ತಂಡ ಶ್ರೀಲಂಕಾ ಲೆಜೆಂಡ್​ ವಿರುದ್ಧ 5 ವಿಕೆಟ್​​ಗಳ ಜಯ ಸಾಧಿಸಿದೆ.

ಡಿವೈ ಪಾಟಿಲ್​ ಸ್ಪೋರ್ಟ್ಸ್​ ಸ್ಟೇಡಿಯಂನಲ್ಲಿ ನಡೆದ ರೋಡ್​ ಸೇಫ್ಟಿ ಲೀಗ್​ನ ಮೂರನೇ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ ಜಯ ಸಾಧಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ತಿಲಕರತ್ನೆ ದಿಲ್ಶನ್​ ನೇತೃತ್ವದ ಶ್ರೀಲಂಕಾ ಲೆಜೆಂಡ್​ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು138 ರನ್​ಗಳಿಸಿತ್ತು. ದಿಲ್ಶನ್​ 23, ರೊಮೇಶ್​ ಕಲುವಿತರಣ 21, ಚಾಮರ ಕಪುಗೆಡೆರ 23 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತಗಳಿಸಲು ನೆರವಾದರು.

ಮುನಾಫ್​ ಪಟೇಲ್​ 4 ವಿಕೆಟ್​, ಸಂಜಯ್​ ಬಂಗಾರ್​, ಮನ್​ಪ್ರೀತ್​ ಗೋನಿ, ಇರ್ಫಾನ್​ ಪಠಾಣ್​ ಹಾಗೂ ಜಹೀರ್​ ಖಾನ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಇನ್ನು 139 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ ಮೊದಲ ಓವರ್​ನಲ್ಲೇ ನಾಯಕ ಸಚಿನ್(0)​ ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಬೆನ್ನಲ್ಲೇ ಸೆಹ್ವಾಗ್​ ತಮ್ಮ ಅಜಾಗರುಕತೆಯಿಂದ ರನ್​ಔಟ್​ ಆದರು. ಮತ್ತೆ 3ನೇ ಓವರ್​ನಲ್ಲಿ ಚಮಿಂದಾ ಚಾಸ್​ ಅವರ ಓವರ್​ನಲ್ಲಿ ಯುವರಾಜ್​ ಸಿಂಗ್ ಕೂಡ 1 ರನ್ನಿಗೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ಆದರೆ ಮೊಹಮ್ಮದ್​ ಕೈಫ್​(46) ಹಾಗೂ ಸಂಜಯ್​ ಬಂಗಾರ್​(18) 43 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಬಂಗಾರ್​ ಔಟಾದ ನಂತರ ಬಂದ ಇರ್ಫಾನ್​ ಪಠಾಣ್​ ನಿಧಾನ ಆಟಕ್ಕೆ ಮೊರೆ ಹೋದರೂ 18 ಓವರ್​ನಲ್ಲಿ ಗೋನಿ ಜೊತೆಗೂಡಿ 26 ರನ್​ ಚಚ್ಚುವ ಮೂಲಕ ಆಟದ ಗತಿಯನ್ನೇ ಬದಲಿಸಿದರು. 19ನೇ ಓವರ್​ನಲ್ಲಿ ಸತತ 3 ಬೌಂಡರಿ ಸಹಿತ 13 ರನ್​ಗಳಿಸಿ ಇನ್ನು 8 ಎಸೆತಗಳಿರುವಂತೆಯೇ ತಂಡವನ್ನು ಗೆಲುವಿನ ದಡಿ ದಾಟಿಸಿದರು.

ಪಠಾಣ್​ 37 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 6 ಬೌಂಡರಿ ಸಹಿತ 57 ರನ್​ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ABOUT THE AUTHOR

...view details