ದುಬೈ:ಲಾಕ್ಡೌನ್ನಿಂದ ಕ್ರಿಕೆಟ್ ಇಲ್ಲದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಐಪಿಎಲ್ ದೊಡ್ಡ ಮನರಂಜನೆ ನೀಡುತ್ತಿದೆ. ಯುಎಇಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತ್ತಿಯ ಮೊದಲ ವಾರದಲ್ಲಿ ಸುಮಾರು 269 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ.
ಇದು ಕಳೆದ ವರ್ಷದ ಆವೃತ್ತಿಗೆ ಹೋಲಿಸಿದರೆ ಪ್ರತಿ ಪಂದ್ಯ ಸುಮಾರು 11 ಮಿಲಿಯನ್(1.1 ಕೋಟಿ)ಗೂ ಹೆಚ್ಚು ವೀಕ್ಷಣೆಯಾಗಿದೆ ಎಂದು ತಿಳಿದು ಬಂದಿದೆ. ಇದಲ್ಲದೇ ಜಾಹೀರಾತು ಮೌಲ್ಯ ಕೂಡ 12ನೇ ಆವೃತ್ತಿಗಿಂತ ಶೇ.15 ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಅಧ್ಯಯನದ ಪ್ರಕಾರ, 2019ರ ಆವೃತ್ತಿಗೆ ಹೋಲಿಕೆ ಮಾಡಿದರೆ ಕಡಿಮೆ ಚಾನೆಲ್ಗಳಿದ್ದರೂ ಸಹಾ ಪ್ರತಿ ಪಂದ್ಯದ ವೀಕ್ಷಣೆಯಲ್ಲಿ ಶೇಕಡಾ 21 ರಷ್ಟು ಏರಿಕೆ ಕಂಡು ಬರುತ್ತಿದೆ.
ಪ್ರತಿ ಮೂರು ಟಿವಿ ವೀಕ್ಷಕರಲ್ಲಿ ಒಬ್ಬರು ಐಪಿಎಲ್ ವೀಕ್ಷಿಸುತ್ತಿದ್ದಾರೆ. ಮತ್ತು ಟವಿ ವೀಕ್ಷಣೆ ಮಾಡುವ ಕುಟುಂಬಗಳಲ್ಲಿ ಶೇಕಡಾ 44 ರಷ್ಟು ಕುಟುಂಬಗಳು ಐಪಿಎಲ್ ವೀಕ್ಷಣೆ ಮಾಡಿದ್ದಾರೆ. ಇದು ಕಳೆದ ಆವೃತ್ತಿಗೆ ಹೋಲಿಸಿದರೆ, ಆರಂಭಿಕ ವಾರಗಳಲ್ಲಿ ಐಪಿಎಲ್ ಟೂರ್ನಮೆಂಟ್ ನೋಡಿರುವವರಲ್ಲಿ ಶೇಕಡಾ 15 ರಷ್ಟು ಬೆಳವಣಿಗೆ ಕಂಡು ಬಂದಿದೆ. ಪಂದ್ಯಾವಳಿಯಲ್ಲಿ, ಮೊದಲ ವಾರದ ಏಳು ಪಂದ್ಯಗಳು 21 ಚಾನೆಲ್‌ಗಳಲ್ಲಿ 60.6 ಬಿಲಿಯನ್ ವೀಕ್ಷಣೆಯ ನಿಮಿಷಗಳನ್ನು ನೋಂದಾಯಿಸಲಾಗಿದೆ.
ಜಾಹೀರಾತು ಪರಿಮಾಣ ಕೂಡ ಶೇಕಡಾ ಮೊದಲ 6 ಪಂದ್ಯಗಳಲ್ಲಿ ಶೇಕಡಾ 15 ಪ್ರತಿಶತದಷ್ಟು ಏರಿಕೆ ಕಂಡಿದೆ. ಆದರೆ, ಕಳೆದ ಪಂದ್ಯದಲ್ಲಿ ಶೇಕಡಾ 2 ರಷ್ಟು ಕುಸಿತ ಕಂಡಿದೆ. ಆದರೂ ಇದರ ಮೌಲ್ಯ ಮೊದಲ 6 ಪಂದ್ಯಗಳಿಗಿಂತಲೂ ಹೆಚ್ಚಿದೆ ಎಂದು ತಿಳಿದು ಬಂದಿದೆ.