ಕರ್ನಾಟಕ

karnataka

ETV Bharat / sports

ಸೀನಿಯರ್​​​​ ಸಿಎಸ್​ಕೆ ವಿರುದ್ಧ ಡೆಲ್ಲಿ ಕಣಕ್ಕೆ...  ಧೋನಿ ತಂತ್ರದ ಮುಂದೆ ನಡೆಯುವುದೇ ಪಂತ್​​​ ಆಟ

12 ನೇ ಆವೃತ್ತಿಯ ತಾವಾಡಿದ ಮೊದಲ ಪಂದ್ಯದಲ್ಲೆ ಅದ್ಭುತ ಪ್ರದರ್ಶನ ತೋರಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಶ್ರೇಯಸ್​ ಅಯ್ಯರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್​ ತಂಡಗಳು ಇಂದು ದೆಹಲಿಯ ಫಿರೋಜ್​ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಎದುರುಬದುರಾಗಲಿವೆ.

ಅಯ್ಯರ್​

By

Published : Mar 26, 2019, 4:57 PM IST

Updated : Mar 26, 2019, 5:09 PM IST

ನವದೆಹಲಿ: ಐಪಿಎಲ್​ನ ಚಾಣಾಕ್ಷ ನಾಯಕ ಹಾಗೂ ಅನುಭವಿ ಆಟಗಾರರ ತಂಡ, ಮತ್ತೊಂದು ಕಡೆ ಮತ್ತೊಂದು ಯುವ ಆಟಾಗಾರರ ದಂಡನ್ನೇ ಹೊಂದಿರುವ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ವಿಜಯಲಕ್ಷ್ಮಿ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

12ನೇ ಆವೃತ್ತಿಯ ತಾವಾಡಿದ ಮೊದಲ ಪಂದ್ಯದಲ್ಲೆ ಅದ್ಭುತ ಪ್ರದರ್ಶನ ತೋರಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಶ್ರೇಯಸ್​ ಅಯ್ಯರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್​ ತಂಡಗಳು ಇಂದು ದೆಹಲಿಯ ಫಿರೋಜ್​ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಎದುರುಬದುರಾಗಲಿವೆ.

ವಾಟ್ಸನ್​ ಹಾಗೂ ರಿಷಭ್​ ಪಂತ್​

ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಯನ್ನು ಕೇವಲ 70 ರನ್​ಗೆ ಆಲೌಟ್​ ಮಾಡಿ ಗೆದ್ದಿರುವ ಚೆನ್ನೈ ಸ್ಫೋಟಕ ಹಾಗೂ ಅನುಭವಿ ಆಟಗಾರರ ದಂಡನ್ನೇ ಹೊಂದಿದೆ. ಆರಂಭಿಕರಾಗಿ ವಾಟ್ಸನ್​, ರಾಯುಡು, ರೈನಾ ಇದ್ದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಜಾಧವ್​ ಆಧಾರ ಸ್ಥಂಭವಾಗಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಅನುಭವಿಗಳ ದಂಡೇ ಇದೆ. ತಾಹಿರ್​, ಭಜ್ಜಿ, ಬ್ರಾವೋ, ಜಡೇಜಾ ಇವರ ಜೊತೆಗೆ ಯುವ ಬೌಲರ್​ಗಳಾದ ದೀಪಕ್​ ಚಹಾರ್​ ಹಾಗೂ ಶಾರ್ದುಲ್​ ಠಾಕೂರ್​ ಇದ್ದು ತಂಡ ಎಲ್ಲಾ ಹಂತದಲ್ಲೂ ಸಮತೋಲನ ಹೊಂದಿದೆ.

ಇನ್ನು ಡೆಲ್ಲಿ ಕ್ಯಾಪಿಟಲ್​ ನೋಡುವುದಾದರೆ ಬಲಿಷ್ಠ ಮುಂಬೈ ತಂಡವನ್ನೇ 37 ರನ್​ಗಳಿಂದ ಬಗ್ಗುಬಡಿದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ತಂಡದಲ್ಲಿ ಯುವ ಆಟಗಾರರಾದ ಪೃಥ್ವಿ ಶಾ, ಶ್ರೇಯಸ್​ ಅಯ್ಯರ್​, ರಿಷಭ್​ ಪಂತ್​ ಜೊತೆಗೆ ಅನುಭವಿಗಳಾದ ಧವನ್​, ಇಂಗ್ರಾಮ್​ ಬ್ಯಾಟಿಂಗ್​ ವಿಭಾಗದ ಶಕ್ತಿಯಾಗಿದ್ದಾರೆ. ಇವರ ಜೊತೆಗೆ ಅಕ್ಷರ್​ ಪಟೇಲ್​, ರಾಹುಲ್​ ತೆವಾಟಿಯಾ ಕೂಡ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಮಾಡಬಲ್ಲರು. ಇನ್ನು ಬೌಲಿಂಗ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೌಲರ್​ಗಳಾದ ಕಗಿಸೋ ರಬಡಾ, ಟ್ರೆಂಟ್​ ಬೌಲ್ಟ್​, ಕೀಮೋ ಪೌಲ್ ಹಾಗೂ ಇಶಾಂತ್​ ಕೂಡ ಚೆನ್ನೈಗೆ ತಲೆನೋವು ತಂದೊಡ್ಡಬಲ್ಲ ಬೌಲರ್​ಗಳಾಗಿದ್ದಾರೆ.

ಬ್ರಾವೋ ಮತ್ತು ಟ್ರೆಂಟ್​ ಬೌಲ್ಟ್​( ಪೋಟೋ ಐಪಿಎಲ್​ ಟ್ವಿಟರ್)​

ಐಪಿಎಲ್​ನಲ್ಲಿ ಮುಖಾಮುಖಿ

ಡೆಲ್ಲಿ-ಚೆನ್ನೈ ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 12 ಬಾರಿ ಚೆನ್ನೈ ಗೆಲುವು ಸಾಧಿಸಿದ್ದರೆ ಡೆಲ್ಲಿ 6 ಬಾರಿ ಗೆದ್ದಿದೆ. ದೆಹಲಿ ಅಂಗಳದಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸಿಎಸ್​ಕೆ, 2ರಲ್ಲಿ ಡೆಲ್ಲಿ ಗೆಲುವು ಸಾಧಿಸಿವೆ.

ಸಂಭಾವ್ಯ ಆಟಗಾರರ ತಂಡ

ಡೆಲ್ಲಿ ಕ್ಯಾಪಿಟಲ್​:
ಶ್ರೇಯಸ್​ ಅಯ್ಯರ್(ನಾಯಕ) ಪೃಥ್ವಿ ಶಾ,​ರಿಷಭ್​ ಪಂತ್, ಶಿಖರ್​ ಧವನ್​, ಕಾಲಿನ್​ ಇಂಗ್ರಾಮ್, ಅಕ್ಷರ್​ ಪಟೇಲ್​, ರಾಹುಲ್​ ತೆವಾಟಿಯಾ, ಕಗಿಸೋ ರಬಡಾ, ಇಶಾಂತ್​ ಶರ್ಮಾ, ಟ್ರೆಂಟ್​ ಬೌಲ್ಟ್​, ಕೀಮೋ ಪೌಲ್

ಚೆನ್ನೈ ಸೂಪರ್​ ಕಿಂಗ್ಸ್​: ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ, ಎಂ.ಎಸ್.ಧೋನಿ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ಹರಭಜನ್​ ಸಿಂಗ್​, ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಶಾರ್ದುಲ್​ ಠಾಕೂರ್​

ಪಂದ್ಯ ಆರಂಭ: ರಾತ್ರಿ 8
ಸ್ಥಳ: ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣ, ದೆಹಲಿ

Last Updated : Mar 26, 2019, 5:09 PM IST

ABOUT THE AUTHOR

...view details