ಹೈದರಾಬಾದ್: ತಲಾ ಮೂರು ಬಾರಿ ಚಾಂಪಿಯನ್, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು, ಚಾಣಾಕ್ಷ ನಾಯಕತ್ವ ಹೊಂದಿರುವ ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು 12ನೇ ಐಪಿಎಲ್ನ ಪೈನಲ್ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ.
ಅಂಕಪಟ್ಟಿಯಲ್ಲಿ ಆರಂಭದಿಂದಲೂ ಚೆನ್ನೈ ಪ್ರಭುತ್ವ ಸಾಧಿಸಿದರೆ, ಟೂರ್ನಿಯ 2ನೇ ಹಂತದಲ್ಲಿ ಪುಟಿದೆದ್ದ ಮುಂಬೈ ಚೆನ್ನೈ ಅನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಲ್ಲದೆ ಕ್ವಾಲಿಫೈಯರ್ನಲ್ಲಿ ಚೆನ್ನೈಗೆ ತವರಿನಲ್ಲಿ ಸೋಲುಣಿಸಿ 5ನೇ ಬಾರಿ ಫೈನಲ್ಗೇರಿದೆ.
ಎರಡು ತಂಡವನ್ನು ಬೌಲರ್ಗಳ ನೆರವಿನಿಂದ ಏಕಾಂಗಿಯಾಗಿ ಹೋರಾಡಿ ಪ್ಲೈ ಆಫ್ ತಲುಪಿದ್ದ ಸಿಎಸ್ಕೆ 1ನೇ ಕ್ವಾಲಿಫೈಯರ್ನಲ್ಲಿ ಸೋಲುಕಂಡರು 2ನೇ ಕ್ವಾಲಿಫೈಯರ್ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಪೈನಲ್ಗೆ ಎಂಟ್ರಿಕೊಟ್ಟಿದೆ.
ಎರಡು ತಂಡಗಳು ತಲಾ 3 ಬಾರಿ ಚಾಂಪಿಯನ್ ಆಗಿದ್ದು, ಈ ಬಾರಿ ಗೆದ್ದವರು 4ನೇ ಬಾರಿ ಚಾಂಪಿಯನ್ ಆಗಲಿದ್ದಾರೆ. ಮುಂಬೈ ಈ ಹಿಂದೆ 4 ಬಾರಿ ಫೈನಲ್ಗೇರಿದ್ದು 3 ಬಾರಿ ಚಾಂಪಿಯನ್ ಪಟ್ಟ ಪಡೆದಿದೆ. ಒಮ್ಮೆ ಸಿಎಸ್ಕೆ ವಿರುದ್ಧವೇ ಫೈನಲ್ನಲ್ಲಿ ಸೋಲನುಭವಿಸಿತ್ತು. ಸಿಎಸ್ಕೆ ಈ ಹಿಂದೆ 7 ಫೈನಲ್ಗೇರಿದ್ದು 3 ಬಾರಿ ಚಾಂಪಿಯನ್ ಆಗಿದ್ದರೆ, 2008ರ ಚೊಚ್ಚಲ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ, 2012 ರಲ್ಲಿ ಕೆಕೆಆರ್ ವಿರುದ್ಧ, 2013 ಹಾಗೂ 2015ರಲ್ಲಿ ಮುಂಬೈ ವಿರುದ್ಧವೇ ಸೋಲುಕಂಡು ರನ್ನರ್ ಅಫ್ಗೆ ತೃಪ್ತಿಪಟ್ಟುಕೊಂಡಿತ್ತು.
ಚಾಂಪಿಯನ್ ಪಟ್ಟ
ಚೆನ್ನೈ ಸೂಪರ್ ಕಿಂಗ್ಸ್: 2010,2011,2018