ಕರ್ನಾಟಕ

karnataka

ETV Bharat / sports

ಐಪಿಎಲ್ ವಿಶ್ವದ ಬೆಸ್ಟ್ ಲೀಗ್, ಅದಕ್ಕೆ ಇದರ ಯಶಸ್ಸು ನನಗೆ ಆಶ್ಚರ್ಯ ತಂದಿಲ್ಲ: ಸೌರವ್​ ಗಂಗೂಲಿ - world best tournament

2020ರ ಐಪಿಎಲ್ ಈ ವರ್ಷದ ಮಾರ್ಚ್​ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಬಿಕ್ಕಟ್ಟಿನಿಂದ ಸೆಪ್ಟೆಂಬರ್​ಗೆ ಮುಂದೂಡಲ್ಲಪಟ್ಟಿದ್ದಲ್ಲದೆ, ಯುಎಇಗೆ ವರ್ಗಾವಣೆಗೊಂಡಿತ್ತು.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

By

Published : Oct 28, 2020, 4:41 PM IST

ನವದೆಹಲಿ: 2020ರ ಐಪಿಎಲ್ ವೀಕ್ಷಕರ ಸಂಖ್ಯೆ ಮತ್ತು ರೇಟಿಂಗ್ ವಿಷಯದಲ್ಲಿ ಪಡೆಯುತ್ತಿರುವ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದರಿಂದ ಹೆಚ್ಚೇನು ಅಶ್ಚರ್ಯವಿಲ್ಲ ಏಕೆಂದರೆ ಐಪಿಎಲ್ ವಿಶ್ವದ ಅತ್ಯುತ್ತಮ ಲೀಗ್​ ಎಂದಿದ್ದಾರೆ.

2020ರ ಐಪಿಎಲ್ ಈ ವರ್ಷದ ಮಾರ್ಚ್​ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಬಿಕ್ಕಟ್ಟಿನಿಂದ ಸೆಪ್ಟೆಂಬರ್​ಗೆ ಮುಂದೂಡಲ್ಲಪಟ್ಟಿದ್ದಲ್ಲದೆ, ಯುಎಇಗೆ ವರ್ಗಾವಣೆಗೊಂಡಿತ್ತು.

" ಇದು ನಂಬಲಸಾಧ್ಯವಾಗಿದೆ, ಆದರೆ ನನಗೆ ಇದರಿಂದ ಆಶ್ಚರ್ಯವಾಗಿಲ್ಲ. ನಾವು ಸ್ಟಾರ್​ ಚಾನೆಲ್​ ಜೊತೆ ಟೂರ್ನಿ ಆಯೋಜನೆಗೆ ಒಂದು ತಿಂಗಳ ಹಿಂದೆ ಈ ವರ್ಷ ಲೀಗ್ ನಡೆಯುವುದೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ಬಯೋ ಬಬಲ್​ನಿಂದ ಫಲಿತಾಂಶ ಯಶಸ್ವಿಯಾಗಿದೆ" ಎಂದು ಗಂಗೂಲಿ ಹೇಳಿದ್ದಾರೆ.

ನಾವು ನಮ್ಮ ಯೋಜನೆಗಳಂತೆ ಮುಂದುವರೆಯಲು ನಿರ್ಧರಿಸಿದೆವು. ಏಕೆಂದರೆ ನಾವು ಎಲ್ಲರ ಜೀವನದಲ್ಲಿ ಸಾಮಾನ್ಯತೆಯನ್ನು ತರಲು ಬಯಸಿದ್ದೆವು. ನೆಚ್ಚಿನ ಕ್ರಿಕೆಟ್​ಅನ್ನು ಮರಳಿ ತರಲು ಬುಯಸಿದ್ದೆವು. ಹಾಗಾಗಿ ವೀಕ್ಷಕರ ಪ್ರತಿಕ್ರಿಯೆಯಿಂದ ನನಗೆ ಆಶ್ಚರ್ಯವಿಲ್ಲ, ಇದು ವಿಶ್ವದ ಅತ್ಯುತ್ತಮ ಪಂದ್ಯಾವರಳಿ ಎಂದಿದ್ದಾರೆ.

ಸೌರವ್ ಹೇಳಿರುವಂತೆ ಈ ವರ್ಷದ ಐಪಿಎಲ್​ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. 2019ಕ್ಕೆ ಹೋಲಿಸಿದರೆ, ಈ ವರ್ಷದ ವೀಕ್ಷಣೆಯಲ್ಲಿ ಶೇಕಡಾ 15ರಷ್ಟು ಹಚ್ಚಾಗಿದೆ. ಪ್ರತಿ ಪಂದ್ಯವೂ ಕಳೆದ ವರ್ಷಕ್ಕಿಂತ 11 ಮಿಲಿಯನ್ ಹೆಚ್ಚಾಗುತ್ತಿದೆ.

ABOUT THE AUTHOR

...view details