ಚೆನ್ನೈ:ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರು ಮತ್ತು ಇತರೆ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಐಪಿಎಲ್ ವೇಳಾಪಟ್ಟಿ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.
ಸಿಎಸ್ಕೆ ಆಟಗಾರರಿಗೆ ಸೋಂಕು ತಗುಲಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಕ್ಷಣ ಯಾವುದೇ ಆಪತ್ತು ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.
ನಿಯಮದ ಪ್ರಕಾರ, ಸೋಂಕಿಗೆ ತುತ್ತಾದ ಆಟಗಾರ 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿದ ನಂತರವೇ ತರಬೇತಿಗೆ ಮರಳಬಹುದು. ತನ್ನ ಸಂಪರ್ಕ ತಡೆಯನ್ನು ಪೂರ್ಣಗೊಳಿಸಿದ ನಂತರ ಜೈವಿಕ-ಸುರಕ್ಷಿತ ವಲಯವನ್ನು ಮತ್ತೆ ಪ್ರವೇಶಿಸಲು ಅನುಮತಿಸುವ ಮೊದಲು ಆಟಗಾರನನ್ನು ಮತ್ತೆ ಪರೀಕ್ಷಿಸಲಾಗುತ್ತದೆ.