ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿರುವುದಕ್ಕಾಗಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ ವಿಧಿಸಲಾಗಿದೆ.
ನಿಧಾನಗತಿ ಬೌಲಿಂಗ್: ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ
ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಈ ಶಿಕ್ಷೆಗೆ ಒಳಗಾಗಿದ್ದಾರೆ.
ಪಂದ್ಯದ ವೇಳೆ ನಿಧಾನಗತಿ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಈ ಕಾರಣಕ್ಕಾಗಿ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 176ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ ಪಂಜಾಬ್ ತಂಡ ಸುಲಭ ಗೆಲುವಿನತ್ತ ಸಾಗಿದ್ದಾಗ, ಗೊಂದಲಕ್ಕೊಳಗಾದ ರೋಹಿತ್ ಶರ್ಮಾ ನಿಧಾನಗತಿ ಬೌಲಿಂಗ್ ಮಾಡಿಸಿದ್ದಾರೆ. ಹೀಗಾಗಿ ದಂಡ ಹಾಕಲಾಗಿದೆ.
ಇದರ ಮಧ್ಯೆ ಕೂಡ ಪಂಜಾಬ್ 18.4 ಓವರ್ಗಳಲ್ಲಿ ಕೇವಲ 2ವಿಕೆಟ್ ಕಳೆದುಕೊಂಡು 177ರನ್ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಇನ್ನು 12ನೇ ಆವೃತ್ತಿ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ತಂಡದ ಕ್ಯಾಪ್ಟನ್ಗೆ ದಂಡ ವಿಧಿಸಲಾಗಿದೆ.