ಅಬುಧಾಬಿ:ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇತ್ತೀಚೆಗೆ ಸ್ಪಿನ್ನರ್ ಸುನೀಲ್ ನರೈನ್ ಬೌಲಿಂಗ್ ಶೈಲಿಯನ್ನು ಅನುಮಾನಾಸ್ಪದ ಎಂದು ವರದಿ ಮಾಡಿ, ಎಚ್ಚರಿಕೆ ನೀಡಿರುವುದಕ್ಕೆ ಕೋಲ್ಕತ್ತಾ ನೈಟ್ ಫ್ರಾಂಚೈಸಿ ಆಶ್ಚರ್ಯ ವ್ಯಕ್ತಪಡಿಸಿದೆ.
ಶನಿವಾರ ಕಿಂಗ್ಸ್ ಇಲೆವೆನ್ ಪಂಜಾನ್ ವಿರುದ್ಧದ ಪಂದ್ಯದ ವೇಳೆ ಪಂದ್ಯದ ಅಧಿಕಾರಿಗಳು ನರೈನ್ ಬೌಲಿಂಗ್ ಶೈಲಿಯ ವಿರುದ್ಧ ವರದಿ ಮಾಡಿದ್ದರು. ಆದರೆ, ಅಧಿಕಾರಿಗಳ ಈ ನಿರ್ಧಾರಕ್ಕೆ ಕೆಕೆಆರ್ ಆಶ್ಚರ್ಯವ್ಯಕ್ತಪಡಿಸಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
"ಸುನೀಲ್ ನರೈನ್ ವಿರುದ್ಧ ನೀಡಲಾಗಿರುವ ಅನುಮಾನಸ್ಪದ ಬೌಲಿಂಗ್ ಶೈಲಿ ವರದಿಯಿಂದ ಫ್ರಾಂಚೈಸಿಗೆ ಅಚ್ಚರಿ ಉಂಟಾಗಿದೆ. ಏಕೆಂದರೆ ನರೈನ್ 2012ರಿಂದ ಇಲ್ಲಿಯವರೆಗೆ 112 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಹಾಗೂ ಹಿಂದೊಮ್ಮೆ 2014ರಲ್ಲಿ ಅನುಮಾನಸ್ಪದ ಬೌಲಿಂಗ್ ಶೈಲಿ ಎಂದು ವರದಿ ಪಡೆದ ನಂತರ SRASSC ಮತ್ತು ಐಸಿಸಿ ಒಳಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಂತರ 2015 ರಿಂದ ಇಲ್ಲಿಯವರೆಗೆ 68 ಪಂದ್ಯಗಳನ್ನಾಡಿದ್ದಾರೆ. ಇದೀಗ ಮತ್ತೆ ಅವರ ಬೌಲಿಂಗ್ ಶೈಲಿಯನ್ನು ಶಂಕಿಸಿರುವುದು ನಿಜಕ್ಕೂ ನರೈನ್ಗೆ ಮತ್ತು ಫ್ರಾಂಚೈಸಿಗೆ ಆಶ್ಚರ್ಯವನ್ನುಂಟುಮಾಡಿದೆ" ಎಂದು ಕೆಕೆಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.