ಕರ್ನಾಟಕ

karnataka

ETV Bharat / sports

ಐಪಿಎಲ್​ ಆಯೋಜಿಸಲು ಶ್ರೀಲಂಕಾ ಸಿದ್ಧ... ದೇಶ ಸಹಜ ಸ್ಥಿತಿಗೆ ಮರಳಿದ ನಂತರವಷ್ಟೇ ಟೂರ್ನಿ​ ಎಂದ ಬಿಸಿಸಿಐ - ಕೊರೊನಾ ವೈರಸ್​ ಭೀತಿ

ಐಪಿಎಲ್​​ ಮಾರ್ಚ್​ 29ರಿಂದ ಏಪ್ರಿಲ್​ 14ರರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್​ಡೌನ್​ನಿಂದ ಮೊದಲು ಏಪ್ರಿಲ್​ 15ರವರೆಗೆ ಮುಂದೂಡಲ್ಪಟ್ಟು, ಇದೀಗ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಒಂದು ವೇಳೆ ದೇಶ ಮರಳಿ ಸಹಜ ಸ್ಥಿತಿಗೆ ಬಂದರೆ ಮಾತ್ರ ಟೂರ್ನಿ ಆಯೋಜನೆ ಮಾಡಲಾಗುವುದು ಎಂದು ಹೇಳಲಾಗಿತ್ತು.

ಐಪಿಎಲ್​ 2020
ಐಪಿಎಲ್​ 2020

By

Published : Apr 19, 2020, 5:06 PM IST

ಮುಂಬೈ:ವಿಶ್ವ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಟಿ-20 ಲೀಗ್​ ಆಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೊರೊನಾ ಭೀತಿಯಿಂದ 13ನೇ ಆವೃತ್ತಿ ರದ್ದಾಗುವ ಆತಂಕ ಎದುರಾಗಿದೆ.

ಭಾರತದಲ್ಲಿ ಕೊರೊನಾ ದಿನದಿಂದ ಹೆಚ್ಚಾಗುತ್ತಿದೆ. ಇದರಿಂದ ಮಿಲಿಯನ್​ ಡಾಲರ್​ ಟೂರ್ನಿಯಾದ ಐಪಿಎಲ್​ ರದ್ದಾಗುವ ಹಂತಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಐಪಿಎಲ್​ಅನ್ನು ತನ್ನ ದೇಶದಲ್ಲಿ ನಡೆಸಿಕೊಡುವುದಕ್ಕೆ ಮುಂದಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ವಿಶ್ವವೇ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ ಈ ವಿಷಯ ಕುರಿತು ಚರ್ಚೆ ಮಾಡುವ ಆಲೋಚನೆ ಇಲ್ಲ ಎಂದಿದೆ.

ಐಪಿಎಲ್​​ ಮಾರ್ಚ್​ 29ರಿಂದ ಏಪ್ರಿಲ್​ 14ರರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್​ಡೌನ್​ನಿಂದ ಮೊದಲು ಏಪ್ರಿಲ್​ 15ರವರೆಗೆ ಮುಂದೂಡಲ್ಪಟ್ಟು, ಇದೀಗ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಒಂದು ವೇಳೆ ದೇಶ ಮರಳಿ ಸಹಜ ಸ್ಥಿತಿಗೆ ಬಂದರೆ ಮಾತ್ರ ಟೂರ್ನಿ ಆಯೋಜನೆ ಮಾಡಲಾಗುವುದು ಎಂದು ಹೇಳಲಾಗಿತ್ತು.

ಆದರೆ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ, ಶ್ರೀಲಂಕಾ ಐಪಿಎಲ್​ ಟೂರ್ನಿಯನ್ನು ಆಯೋಜನೆ ಮಾಡಲು ಸಿದ್ಧವಿದೆ. ಕೊರೊನಾ ಪಾಸಿಟಿವ್​ ಪ್ರಕರಣಗಳು ಕಡಿಮೆ ಇದ್ದು, ಭಾರತಕ್ಕಿಂದ ಬೇಗ ಶ್ರೀಲಂಕಾ ಸಹಜ ಸ್ಥಿತಿಗೆ ಬರಲಿರುವುದರಿಂದ ಎಸ್​ಎಲ್​ಸಿ ಭಾರತಕ್ಕೆ ಆಫರ್​ ನೀಡಿತ್ತು.

ವಿಶ್ವವೇ ಕೊರೊನಾದಿಂದ ಮುಚ್ಚಿಕೊಂಡಿರುವ ಈ ಸ್ಥಿತಿಯಲ್ಲಿ ಬಿಸಿಸಿಐ ಯಾವುದೇ ರೀತಿಯ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೋರ್ಡ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ಗಡಿ ದಾಟಿದೆ. ಇದಕ್ಕೆ ಹೋಲಿಸಿದರೆ ಶ್ರೀಲಂಕಾದಲ್ಲಿ ಕೇವಲ 200 ಇದೆ. ಭಾರತದಲ್ಲಿ ಸಾವಿನ ಸಂಖ್ಯೆಯೇ 500ರ ಗಡಿ ದಾಟಿದೆ .

ಆದರೆ ಬಿಸಿಸಿಐ ಮಾತ್ರ ಈ ವಿಚಾರ ಕುರಿತು ಎಸ್​ಎಲ್​ಸಿಯಿಂದ ಯಾವುದೇ ಪ್ರಸ್ರಾಪ ಬಂದಿಲ್ಲ. ಮುಂದೆಯೂ ಈ ಕುರಿತು ಚರ್ಚೆ ನಡೆಯುತ್ತದೆ ಎಂಬುದರ ಬಗ್ಗೆಯೂ ಖಚಿತತೆಯಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಐಪಿಎಲ್​ ಟೂರ್ನಿಗಳು ಭಾರತದಿಂದಾಚೆ ನಡೆದಿದ್ದವು. 2009ರಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದರಿಂದ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿ ನಡೆದಿತ್ತು. ಇನ್ನು 2014ರ ಚುನಾವಣೆ ವೇಳೆಯೂ ಕೆಲವು ಪಂದ್ಯಗಳು ದುಬೈನಲ್ಲಿ ನಡೆದಿದ್ದವು.

ABOUT THE AUTHOR

...view details