ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಸಮಯ ಬದಲವಣೆಗೆ ಒತ್ತಾಯ ಕೇಳಿಬಂದಿದ್ದು, ಈ ಬಗ್ಗೆ ನಿರ್ಧರಿಸಲು ಐಪಿಎಲ್ ಆಡಳಿತ ಮಂಡಳಿಯ ಅಧಿಕಾರಿಗಳು ಸೋಮವಾರ ನವದೆಹಲಿಯಲ್ಲಿ ಸಭೆ ಸೇರಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಐಪಿಎಲ್ ಪಂದ್ಯಗಳ ಆರಂಭದ ಸಮಯವನ್ನ ರಾತ್ರಿ 8 ಗಂಟೆ ಬದಲು 30 ನಿಮಿಷ ಮೊದಲು, ಅಂದರೆ 7:30ಕ್ಕೆ ಬದಲಾಯಿಸುವಂತೆ ಟಿವಿ ಪ್ರಸಾರಕರು ಒತ್ತಾಯಿಸಿದ್ದಾರೆ. ಆದರೆ ಅವರ ಒತ್ತಾಯವನ್ನು ಐಪಿಎಲ್ ಆಡಳಿತ ಮಂಡಳಿ ತಿರಸ್ಕರಿಸಿತ್ತು.
ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಾರ್ಚ್ 29ರಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು, ರಾತ್ರಿ ಪಂದ್ಯಗಳ ಸಮಯವನ್ನ ಬದಲಾಯಿಸುವಂತೆ ಪ್ರಸಾರಕರು ಒತ್ತಾಯಿಸಿ ಬಿಸಿಸಿಐ ತೀರ್ಮಾನಕ್ಕೆ ಕಾಯುತ್ತಿದ್ದಾರೆ. ಆದರೆ ಬಿಸಿಸಿಐ ಈ ವಿಷಯದ ಕುರಿತು ಫ್ರಾಂಚೈಸಿಗಳೊಂದಿಗೆ ಚರ್ಚೆ ನಡೆಸಿಲ್ಲ ಎನ್ನಲಾಗಿದೆ.
ಪ್ರಸಾರಕರ ಒತ್ತಾಯಕ್ಕೆ ಕಾರಣ:
- ಪಂದ್ಯ ಬೇಗ ಪ್ರಾರಂಭವಾದರೆ ಹೆಚ್ಚಿನ ವೀಕ್ಷಕರನ್ನ ಸೆಳೆಯಬಹುದು
- ಲೀಗ್ ಮತ್ತು ಫ್ರಾಂಚೈಸಿಗಳ ಪ್ರಾಯೋಜಕರು ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
- ವೀಕ್ಷಕರು ಬೇಗನೆ ಮನೆಗೆ ಮರಳಲು ಸಾಧ್ಯವಾಗುತ್ತದೆ ಎಂಬುದು ಪ್ರಚಾರಕರ ವಾದ
ಪ್ರಸ್ತುತ ರಾತ್ರಿ ಪಂದ್ಯಗಳು ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತವೆ
ಆದರೆ ಪಂದ್ಯ ಬೇಗ ಪ್ರಾರಂಭವಾದರೆ ಮಂಜಿನ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಯಾವುದಾದರು ಒಂದು ತಂಡಕ್ಕೆ ಹೆಚ್ಚಿನ ಪ್ರಯೋಜವಾಗುತ್ತದೆ ಎಂದು ಪ್ರಸಾರಕರ ಮನವಿಯನ್ನು ತಿರಸ್ಕರಿಸಲಾಗಿತ್ತು. ಮುಂಬೈ, ಬೆಂಗಳೂರಿನಂತಹ ನಗರದ ಜನರು ತಮ್ಮ ಕೆಲಸ ಮುಗಿಸಿ ಮನೆಗೆ ತೆರಳಿ ಮೈದಾನಕ್ಕೆ ಬರಬೇಕೆಂದರೆ ಸಮಯ ಬೇಕಾಗುತ್ತದೆ. 8 ಗಂಟೆಗೆ ಪಂದ್ಯ ಇದ್ದರೂ 8:30ರ ನಂತರವೇ ಹೆಚ್ಚು ಜನರು ಮೈದಾನಕ್ಕೆ ಆಗಮಿಸುತ್ತಾರೆ. ಅಲ್ಲದೆ ಟಿವಿ ರೇಟಿಂಗ್‌ಗಾಗಿ ಕ್ರಿಕೆಟ್ ಪಂದ್ಯದ ಸಮಯದಲ್ಲಿ ರಾಜಿ ಆಗಬಾರದು ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ.