ಕರ್ನಾಟಕ

karnataka

ETV Bharat / sports

ಗಡಿ ಜಟಾಪಟಿ: ಐಪಿಎಲ್​ ​ಪ್ರಾಯೋಜಕತ್ವ ಮರು ಪರಿಶೀಲನೆಗೆ ಐಪಿಎಲ್ ಮಂಡಳಿ ತೀರ್ಮಾನ - ವಿವೋ ಮೊಬೈ

"ಗಡಿಗೆ ಸಂಬಂಧಿಸಿದ ಸಂಘರ್ಷದಲ್ಲಿ ನಮ್ಮ ಧೀರ ಯೋಧರು ಹುತಾತ್ಮರಾದ ಘಟನೆಯನಾಧರಿಸಿ, ಐಪಿಎಲ್‌ ಹೊಂದಿರುವ ವಿವಿಧ ಪ್ರಾಯೋಜಕತ್ವ ಒಪ್ಪಂದಗಳನ್ನು ವಿಮರ್ಶೆ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಸಲಿದೆ" ಎಂದು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಪ್ರಾಯೋಜಕತ್ವದ ವಿಮರ್ಶೆ
ಐಪಿಎಲ್ ಆಡಳಿತ ಮಂಡಳಿ

By

Published : Jun 20, 2020, 11:42 AM IST

ಮುಂಬೈ: ಪೂರ್ವ ಲಡಾಕ್​ನಲ್ಲಿ ಚೀನಾ ಸೈನಿಕರು ನಡೆಸಿದ ಹಿಂಸಾತ್ಮಕ ಘರ್ಷಣೆಯಿಂದ 20 ಭಾರತೀಯ ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಐಪಿಎಲ್​ ಆಡಳಿತ ಮಂಡಳಿ ಮುಂದಿನ ವಿವಿಧ ಪ್ರಾಯೋಜಕತ್ವದ ಒಪ್ಪಂದಗಳನ್ನು ಮರು ಪರಿಶೀಲಿಸಲು ಸಭೆ ನಡೆಸಲಿದೆ.

ಪ್ರಸ್ತುತ, ಚೀನಾ ಮೂಲಕ ಮೊಬೈಲ್​ ತಯಾರಕ ಕಂಪನಿಯಾದ ವಿವೋ ಕಂಪನಿ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದೆ, 440 ಕೋಟಿ ರೂ.ಗಳ ಈ ಒಪ್ಪಂದದ ಅವಧಿ 2022ಕ್ಕೆ ಕೊನೆಗೊಳ್ಳಲಿದೆ. ಐಪಿಎಲ್ ಶೀರ್ಷಿಕೆ ಹಕ್ಕುಗಳ ಒಪ್ಪಂದಗಳನ್ನು ಪುನರ್ ವಿಮರ್ಶಿಸುವ ಸಲುವಾಗಿ ಮುಂದಿನ ತಿಂಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಸಿಸಿಐ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ..

"ಗಡಿಗೆ ಸಂಬಂಧಿಸದ ಸಂಘರ್ಷದಲ್ಲಿ ನಮ್ಮ ಧೀರ ಯೋಧರು ಹುತಾತ್ಮರಾದ ಘಟನೆಯನ್ನಾಧರಿಸಿ, ಐಪಿಎಲ್‌ ಹೊಂದಿರುವ ವಿವಿಧ ಪ್ರಾಯೋಜಕತ್ವ ಒಪ್ಪಂದಗಳನ್ನು ವಿಮರ್ಶೆ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಸಲಿದೆ" ಎಂದು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಇದಕ್ಕೂ ಮುನ್ನ, ಚೀನಾದ ಯಾವ ಪ್ರಾಯೋಜಕತ್ವದೊಂದಿಗೆ ಒಪ್ಪಂದಗಳನ್ನು ಮುರಿದುಕೊಳ್ಳಲಿರುವ ವಿಚಾರವನ್ನು ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಖಜಾಂಚಿ ಆನಂದೇಶ್ವರ ಪಾಂಡೆ ಗುರುವಾರ ತಿಳಿಸಿದ್ದರು.

ಭಾರತೀಯ ಮತ್ತು ಚೀನಾ ಸೈನಿಕರ ನಡುವಿನ ಲೈನ್​ ಆಫ್ ಆ್ಯಕ್ಚುವಲ್​​​​​ ಕಂಟ್ರೋಲ್​(ಎಲ್​ಎಸಿ)ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇದರಿಂದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕರೆ ದೇಶದಲ್ಲಿ ಹೆಚ್ಚಾಗುತ್ತಿದೆ. ಚೀನಾದ ಹೂಡಿಕೆಗಳನ್ನು ನಿಲ್ಲಿಸುವಂತೆ ಅನೇಕ ಜನರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details