ಕರ್ನಾಟಕ

karnataka

ETV Bharat / sports

ಫೈನಲ್​ ಪಂದ್ಯದಲ್ಲಿ ಅಬ್ಬರ: ಮಯಾಂಕ್​​ - ಕೆಎಲ್​ಗೆ ಕಿಂಗ್ಸ್​ ಪಂಜಾಬ್​​​ ಅಭಿನಂದನೆ! - ಕಿಂಗ್ಸ್​ ಇವೆಲೆನ್​ ಪಂಜಾಬ್​​

ವಿಜಯ್​ ಹಜಾರೆ ಫೈನಲ್​​ ಪಂದ್ಯದಲ್ಲಿ ಗೆಲುವು ಸಾಧನೆ ಮಾಡಿದ್ದಕ್ಕಾಗಿ ಕೆಲ ಆಟಗಾರರಿಗೆ ಐಪಿಎಲ್ ಪ್ರಾಂಚೈಸಿಗಳು ಅಭಿನಂದನೆ ಸಲ್ಲಿಕೆ ಮಾಡಿವೆ.

ಕೆಎಲ್​ ರಾಹುಲ್​​-ಮಯಾಂಕ್​​

By

Published : Oct 25, 2019, 8:48 PM IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮಿಳುನಾಡು ತಂಡದ ವಿರುದ್ಧ ನಡೆದ ವಿಜಯ್​ ಹಜಾರೆ ಫೈನಲ್​ ಪಂದ್ಯದಲ್ಲಿ ಕರ್ನಾಟಕ 60ರನ್​ಗಳ ಅಂತರದ ಗೆಲುವಿನ ನಗೆ ಬೀರಿದ್ದು, 4ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.

ತಮಿಳುನಾಡು ನೀಡಿದ್ದ 252ರನ್​ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಮಯಾಂಕ್​ ಅಗರವಾಲ್​​ ಅಜೇಯ (69) ಹಾಗೂ ಕೆಎಲ್​ ರಾಹುಲ್​​ ಅಜೇಯ(52) ರನ್​ಗಳ ನೆರವಿನಿಂದ 23 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್​ ಕಳೆದುಕೊಂಡ 146ರನ್​ಗಳಿಕೆ ಮಾಡಿತ್ತು. ಈ ವೇಳೆ ಮಳೆ ಸುರಿದ ಕಾರಣ ವಿಜಿಡಿ ನಿಯಮದ ಪ್ರಕಾರ ಕರ್ನಾಟಕ ತಂಡ ವಿಜೇತ ಎಂದು ಘೋಷಣೆ ಮಾಡಲಾಯಿತು.

ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಎಲ್​ ರಾಹುಲ್​ ಹಾಗೂ ಮಯಾಂಕ್​ ಅಗರವಾಲ್​ಗೆ ಐಪಿಎಲ್​ ಪ್ರಾಂಚೈಸಿ ಕಿಂಗ್ಸ್​ ಇವೆಲೆನ್​ ಪಂಜಾಬ್​ ತಂಡ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದೆ.

ಇದರ ಮಧ್ಯೆ ಕರ್ನಾಟಕ ತಂಡದ ಕ್ಯಾಪ್ಟನ್​​ ಮನೀಷ್​ ಪಾಂಡೆಗೂ ಸನ್​ರೈಸರ್ಸ್​ ಹೈದರಾಬಾದ್​ ಪ್ರಾಂಚೈಸಿ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್​ ಮಾಡಿದೆ.

ಇನ್ನು ಸೆಮಿಫೈನಲ್​ನಲ್ಲೂ ಚಂಡೀಗಢ ವಿರುದ್ಧ ಅಬ್ಬರಿಸಿದ್ದ ಕೆಎಲ್​ ಅಜೇಯ 88ರನ್​ಗಳಿಕೆ ಮಾಡಿದರೆ, ​ಮಯಾಂಕ್​ ಅಗರವಾಲ್​​ 33 ಎಸೆತಗಳಲ್ಲಿ 47ರನ್​ಗಳಿಕೆ ಮಾಡಿ ಗಮನ ಸೆಳೆದಿದ್ದರು.

ABOUT THE AUTHOR

...view details