ಕರ್ನಾಟಕ

karnataka

ETV Bharat / sports

ಐಪಿಎಲ್​ ಉದ್ಘಾಟನಾ ಪಂದ್ಯ : ಟಾಸ್​ ಗೆದ್ದ CSK ಬೌಲಿಂಗ್​ ಆಯ್ಕೆ - ಧೋನಿ

12ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಉದ್ಘಾಟನಾ ಪಂದ್ಯ ಆರಂಭಗೊಂಡಿದೆ. ಹೈವೋಲ್ಟೆಜ್​ ಪಂದ್ಯದಲ್ಲಿ ಆರ್​ಸಿಬಿ-ಸಿಎಸ್​ಕೆ ಫೈಟ್​ ನಡೆಸುತ್ತಿವೆ.

ಸಿಎಸ್​ಕೆ-ಆರ್​ಸಿಬಿ

By

Published : Mar 23, 2019, 7:55 PM IST

Updated : Mar 27, 2019, 11:20 PM IST

ಚೆನ್ನೈ :12ನೇ ಆವೃತ್ತಿ ಇಂಡಿಯನ್​ ಪ್ರಿಮೀಯರ್​ ಲೀಗ್​ನ ಉದ್ಘಾಟನಾ ಪಂದ್ಯ ಆರಂಭಗೊಂಡಿದೆ. ಟಾಸ್​ ಗೆದ್ದ ಧೋನಿ ನೇತೃತ್ವದ ಸಿಎಸ್​ಕೆ ತಂಡ ಬೌಲಿಂಗ್​ ಆಯ್ದುಕೊಂಡಿದೆ.

ಇಲ್ಲಿನ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ಆರಂಭಗೊಂಡಿದ್ದು, ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ತವಕದಲ್ಲಿವೆ. ಈವರೆಗೆ ಕಪ್​ ಗೆಲ್ಲಲ್ಲು ಆರ್​ಸಿಬಿ ಕೈಗೊಂಡಿರುವ ಯೋಜನೆ ವಿಫಲಗೊಂಡಿದೆ. ಈ ಸಲ ಕಪ್​ ಗೆಲ್ಲಲೇಬೇಕು ಎಂಬ ಉದ್ದೇಶ ಆರ್ ಸಿಬಿಗೆ ಇದೆ. ಹಾಲಿ ಚಾಂಪಿಯನ್​ ಚೆನ್ನೈ ಮತ್ತೊಂದು ಅವಧಿಗೆ ಕಪ್​ ಗೆ ಮುತ್ತಿಕ್ಕುವ ಉತ್ಸಾಹದಲ್ಲಿದೆ.

ಕಳೆದ 11 ಆವೃತ್ತಿಗಳ ಅಂಕಿ-ಅಂಶ ಗಮನಿಸಿದರೆ ಸಿಎಸ್​ಕೆ ಆರ್​ಸಿಬಿಗಿಂತ ಮುಂದಿದೆ. 23 ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಸಿಎಸ್​ಕೆ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆರ್​ಸಿಬಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ರದ್ದಾಗಿದೆ.

ತಂಡ ಇಂತಿವೆ :
ಆರ್​ಸಿಬಿ :
ಪೃಥ್ವಿ ಶಾ(ವಿ.ಕೀ),ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಮೊಯಿನ್​ಅಲಿ, ಎಬಿಡಿ ವಿಲಿಯರ್ಸ್​,ಶಿಮ್ರಾನ್​,ಶಿವಂ ದುಬೆ,ಕಾಲಿನ್​ ಗ್ರ್ಯಾಂಡ್​ಹೋಮ್​,ಉಮೇಶ್​ ಯಾದವ್,
ಯಜುವೇಂದ್ರ ಚಹಲ್​, ಮೊಹಮ್ಮದ್​ ಸಿರಾಜ್​, ನವದೀಪ್​ ಸೈನಿ.

ಸಿಎಸ್​ಕೆ : ಅಂಬಾಟಿ ರಾಯುಡು, ಶೇನ್​ ವ್ಯಾಟ್ಸನ್​, ಸುರೇಶ್​ ರೈನಾ, ಎಂಎಸ್​ ಧೋನಿ(ವಿ.ಕೀ/ಕ್ಯಾಪ್ಟನ್​), ಕೇದಾರ್​ ಜಾಧವ್​, ರವೀಂದ್ರ ಜಡೇಜಾ, ಡ್ವೇನ್​ ಬ್ರಾವೋ, ದೀಪಕ್​ ಚಹರ್​, ಶಾರ್ದೂಲ್​ ಠಾಕೂರ್​, ಹರ್ಭಜನ್​ ಸಿಂಗ್​, ಇಮ್ರಾನ್​ ತಾಹೀರ್​.

Last Updated : Mar 27, 2019, 11:20 PM IST

ABOUT THE AUTHOR

...view details