ನವದೆಹಲಿ :ಆಸ್ಟ್ರೇಲಿಯಾದಲ್ಲಿ ಈ ಮೊದಲೇ ಯೋಚಿಸಿದಂತೆ ಟಿ -20 ವಿಶ್ವಕಪ್ ಪಂದ್ಯ ನಡೆಯಬಹುದು. ಹಾಗಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯನ್ನು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಸರ್ಕಾರ ಶೇ. 25 ಜನ ಸೇರಬಹುದು ಎಂದು ಘೋಷಿಸಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಟಿ-20 ವಿಶ್ವ ಕಪ್ ನಡೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಸರ್ಕಾರದ ಪ್ರಕಟಣೆಯ ನಂತರ ಬಹುಶಃ ತಂಡಗಳು ಮೂರು ವಾರಗಳ ಮುಂಚೆಯೇ ತಲುಪಬೇಕಾಗಬಹುದು, ಏಳು ದಿನಗಳ ಅಭ್ಯಾಸ ಪಂದ್ಯದ ಬಳಿಕ 14 ದಿನಗಳ ಕ್ವಾರಂಟೈನ್ ಇರಬಹುದು ಎಂದು ಹೇಳಿದ್ದಾರೆ.