ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​​​ ಮುಂದೂಡಿಕೆಯಾದ್ರೆ ಅಕ್ಟೋಬರ್​-ನವೆಂಬರ್​ನಲ್ಲಿ ಐಪಿಎಲ್​: ಬಿಸಿಸಿಐ

ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ ಅನೇಕ ಮಹತ್ವದ ಟೂರ್ನಿಗಳನ್ನು ಮುಂದೂಡಿಕೆ ಮಾಡಿದೆ. ಇದೇ ತಿಂಗಳ 29ರಿಂದ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿದೆ.

IPL
IPL

By

Published : Mar 31, 2020, 5:07 PM IST

ನವದೆಹಲಿ:ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ಇಡೀ ವಿಶ್ವವೇ ಅನೇಕ ಮಹತ್ವದ ನಿರ್ಧಾರ ಕೈಗೊಂಡು ಜಾರಿಗೊಳಿಸಿದ್ದು, ಇದರ ಮಧ್ಯೆ ಅನೇಕ ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಭಾರತದಲ್ಲಿ ನಡೆಯುವ ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿದೆ.

ಎಲ್ಲವೂ ಸರಿಯಾಗಿದ್ದಿದ್ದರೆ ಇದೇ ತಿಂಗಳ 29ರಿಂದ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಬೇಕಾಗಿತ್ತು. ಆದರೆ ಕೊರೊನಾ ವೈರಸ್​​ನಿಂದಾಗಿ ಟೂರ್ನಿ ಮುಂದೂಡಿಕೆಯಾಗಿದೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಒಂದು ವೇಳೆ ಮುಂದೂಡಿಕೆಯಾದರೆ ಇದೇ ವರ್ಷ ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಐಪಿಎಲ್​​ ಟೂರ್ನಿ ನಡೆಸಲು ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಇದೇ ವರ್ಷ ಅಕ್ಟೋಬರ್​ 18ರಿಂದ ನವೆಂಬರ್​​ 15ರವರೆಗೆ ವಿಶ್ವಕಪ್​ ಟೂರ್ನಿ ನಡೆಯಲಿದ್ದು, ಅದು ಮುಂದೂಡಿಕೆಯಾದರೆ ಐಪಿಎಲ್​ ನಡೆಸಬಹುದು ಎಂದು ತಿಳಿಸಿದೆ. ಈ ಸಲದ ಐಸಿಸಿ ಟಿ-20 ಪುರುಷರ ವಿಶ್ವಕಪ್​ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಟಿ-20 ವಿಶ್ವಕಪ್​ ಮುಂದೂಡಿಕೆ ಅಸಾಧ್ಯ

ಇನ್ನು ಐಸಿಸಿ ಕ್ರಿಕೆಟ್​ ಕೌನ್ಸಿಲ್​, ಯಾವುದೇ ಕಾರಣಕ್ಕೂ ಕ್ರಿಕೆಟ್​​ ಟೂರ್ನಿ ಮುಂದೂಡಿಕೆ ಮಾಡುವುದಿಲ್ಲ ಎಂದಿದೆ. ಈಗಾಗಲೇ ಬೋರ್ಡ್​ನ ಸದಸ್ಯರು ಸಭೆ ನಡೆಸಿದ್ದು, ಟೂರ್ನಿ ಮುಂದೂಡಿಕೆ ಮಾಡುವಂತೆ ಯಾರೂ ಕೇಳಿಕೊಂಡಿಲ್ಲ ಎಂದು ಐಸಿಸಿ ತಿಳಿಸಿದೆ. ಕೊರೊನಾ ವೈರಸ್​​ನಿಂದಾಗಿ ಈ ವರ್ಷ ನಡೆಯಬೇಕಾಗಿದ್ದ ಟೋಕಿಯೋ ಒಲಿಂಪಿಕ್ಸ್ ಕೂಡಾ​ ಮುಂದೂಡಿಕೆಯಾಗಿದೆ.

ABOUT THE AUTHOR

...view details