ಮುಂಬೈ :ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಡೇನಿಯಲ್ ಸ್ಯಾಮ್ ಮತ್ತು ಹರ್ಷಲ್ ಪಟೇಲ್ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕ್ಯಾಷ್ ಡೀಲ್ ಮೂಲಕ ಖರೀದಿಸಿದೆ.
ಆರ್ಸಿಬಿ 12 ಆಟಗಾರರನ್ನು ಉಳಿಸಿಕೊಂಡು 10 ಆಟಗಾರರನ್ನು ಬಿಡುಗಡೆ ಮಾಡಿದೆ. ಮೋರಿಸ್ರನ್ನು ರಿಲೀಸ್ ಮಾಡಿರುವುದರಿಂದ ಆಲ್ರೌಂಡರ್ ಕೋಟಾಗೆ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಡೇನಿಯಲ್ ಸ್ಯಾಮ್ರನ್ನು ಆರ್ಸಿಬಿ ಕ್ಯಾಷ್ ಡೀಲ್ ಮೂಲಕ ಖರೀದಿಸಿದೆ.
ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇಂಗ್ಲೆಂಡ್ನ ಜೇಸನ್ ರಾಯ್ ಅವರ ಬದಲಿ ಆಟಗಾರನಾಗಿ ಡೇನಿಯಲ್ ಸ್ಯಾಮ್ಸ್ರನ್ನು ನೇಮಕ ಮಾಡಿತ್ತು. ಆದರೆ, ಇಡೀ ಟೂರ್ನಿಯಲ್ಲಿ ಒಂದು ವಿಕೆಟ್ ಪಡೆಯಲು ವಿಫಲರಾದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.