ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು 2021ರ ಐಪಿಎಲ್ಗೂ ಮುನ್ನ ಬ್ಯಾಟಿಂಗ್ ಸಲಹೆಗಾರನನ್ನಾಗಿ ನೇಮಕ ಮಾಡಿದೆ.
ಬಂಗಾರ್ ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್ನಲ್ಲೂ ಕೆಲವು ತಂಡದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ಅಪಾರ ಅನುಭವವನ್ನು ಹೊಂದಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿರುವ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಕೋಚ್ ಶ್ರೀದರನ್ ಶ್ರೀರಾಮ್ ಹಾಗೂ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಅವರ ಜೊತೆ 2021ರ ಐಪಿಎಲ್ನಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಳ್ಳಲಿದ್ದಾರೆ.
" ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದ ನಮ್ಮ ಕೋಚಿಂಗ್ ತಂಡಕ್ಕೆ ಸಂಜಯ್ ಬಂಗಾರ್ ಅಂತಹ ಅನುಭವವುಳ್ಳ ಕೋಚ್ ಆಗಿರುವವರನ್ನು ಸೇರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ" ಎಂದು ಆರ್ಸಿಬಿ ಟ್ವೀಟ್ ಮೂಲಕ ಖಚಿತಪಡಿಸಿದೆ.
ತಂಡದಲ್ಲಿ ಬಂಗಾರ್ ಪಾತ್ರದ ಬಗ್ಗೆ ಮಾತನಾಡಿರುವ ಮೈಕ್ ಹೆಸನ್, " 48 ವರ್ಷದ ಬಂಗಾರ್ ಐಪಿಎಲ್ ಪೂರ್ವ ಶಿಬಿರಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಶಿಬಿರಗಳಲ್ಲಿ ಸಂಪೂರ್ಣ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಬಂಗಾರ್ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಭಾರತದ ಪಿಚ್ಗಳೆಂದರೆ ರೂಟ್ಗೆ ಬಲು ಇಷ್ಟ: ರೆಕಾರ್ಡ್ ಹೇಗಿದೆ ಗೊತ್ತಾ?