ನವದೆಹಲಿ :ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಚೆನ್ನೈನಲ್ಲಿ ತರಬೇತಿ ಶಿಬಿರ ಆರಂಭಿಸಿದೆ. 14ನೇ ಆವೃತ್ತಿಯ ಲೀಗ್ಗೆ ಕೇವಲ 2 ದಿನಗಳಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಇದೀಗ ಆಪತ್ಬಾಂಧವ ಕೀರನ್ ಪೊಲಾರ್ಡ್ 7 ದಿನಗಳ ಖಡ್ಡಾಯ ಕ್ವಾರಂಟೈನ್ ಮುಗಿಸಿದ್ದಾರೆ. ಇಂದಿನಿಂದ ತಂಡದ ಜೊತೆಗೆ ತರಬೇತಿ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ವಿಡಿಯೋ ಮತ್ತು ಫೋಟೊಗಳಲ್ಲಿ ಪೊಲಾರ್ಡ್ ಕಾಣದೆ ಇರುವುದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
"ವೆಸ್ಟ್ ಇಂಡೀಸ್ನಿಂದ ಬಂದು ಚೆನ್ನೈನಲ್ಲಿ ಮುಂಬೈ ಯುನಿಟ್ ಸೇರಿದ್ದ ಪೊಲಾರ್ಡ್, ಬಿಸಿಸಿಐ ಫ್ರೋಟೋಕಾಲ್ಗಳ ಪ್ರಕಾರ 7 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಆದ್ದರಿಂದಲೇ ಮುಂಬೈ ಇಂಡಿಯನ್ಸ್ ತರಬೇತಿ ಶಿಬಿರಗಳಲ್ಲಿ ಕಾಣಿಸುತ್ತಿರಲಿಲ್ಲ" ಎಂದು ಫ್ರಾಂಚೈಸಿ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದೆ.