ಹೈದರಾಬಾದ್:14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೋಸ್ಕರ ಈಗಾಗಲೇ ಎಲ್ಲ ಪ್ರಾಂಚೈಸಿ ಸಖತ್ ಆಗಿ ಸಜ್ಜುಗೊಳ್ಳುತ್ತಿದ್ದು, ಇದರ ಮಧ್ಯೆ ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡ ಹೆಸರು ಬದಲಾವಣೆ ಮಾಡಿಕೊಂಡಿದೆ.
ಏಪ್ರಿಲ್ 2ನೇ ವಾರದಲ್ಲಿ 14ನೇ ಆವೃತ್ತಿ ಐಪಿಎಲ್ ಪಂದ್ಯಗಳು ನಡೆಯುವ ಸಾಧ್ಯತೆ ಇದ್ದು, ಅದಕ್ಕಾಗಿ ಫೆ. 18ರಂದು ಮುಂಬೈನಲ್ಲಿ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಕನ್ನಡಿಗ ಕೆ.ಎಲ್. ರಾಹುಲ್ ಇದ್ದು, ಅನಿಲ್ ಕುಂಬ್ಳೆ ಕೋಚ್ ಆಗಿದ್ದಾರೆ.