ಕರ್ನಾಟಕ

karnataka

ETV Bharat / sports

ಆರ್​ಸಿಬಿ ಜರ್ಸಿಯಲ್ಲಿ ಮ್ಯಾಕ್ಸ್​ವೆಲ್​.. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಪಡೆಗೆ ಆನೆ ಬಲ! - ಆರ್​ಸಿಬಿ ಜರ್ಸಿಯಲ್ಲಿ ಮ್ಯಾಕ್ಸ್​ವೆಲ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿಕೊಂಡಿರುವ ಗ್ಲೆನ್​ ಮ್ಯಾಕ್ಸ್​​ವೆಲ್​ ತಂಡದ ಜರ್ಸಿ ಹಾಕಿಕೊಂಡು ನೆಟ್​ನಲ್ಲಿ ಬೆವರು ಹರಿಸುತ್ತಿದ್ದು, ಇದರ ಫೋಟೋ ಪ್ರಾಂಚೈಸಿ ಟ್ವೀಟರ್​ನಲ್ಲಿ ಶೇರ್​ ಮಾಡಿದೆ.

Glenn Maxwell In RCB Colours
Glenn Maxwell In RCB Colours

By

Published : Apr 6, 2021, 3:50 PM IST

Updated : Apr 6, 2021, 6:01 PM IST

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲು ಕೇವಲ ಮೂರು ದಿನಗಳ ಕಾಲ ಬಾಕಿ ಉಳಿದಿದ್ದು, ಈಗಾಗಲೇ ಎಲ್ಲ ಪ್ರಾಂಚೈಸಿಗಳು ಸಖತ್​ ಆಗಿ ತಯಾರಿ ನಡೆಸ್ತಿವೆ. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸಹ ಇದರಿಂದ ಹೊರತಾಗಿಲ್ಲ.

ಕಳೆದ 13 ಆವೃತ್ತಿಗಳಿಂದಲೂ ಪ್ರಶಸ್ತಿ ಗೆಲ್ಲಲ್ಲು ವಿಫಲಗೊಂಡಿರುವ ವಿರಾಟ್​ ನೇತೃತ್ವದ ಆರ್​ಸಿಬಿ ಈ ಸಲ ಆ ಬರ ತೀರಿಸಿಕೊಳ್ಳುವ ತವಕದಲ್ಲಿದ್ದು, ಅದಕ್ಕೆ ಆಸ್ಟ್ರೇಲಿಯಾದ ಗ್ಲೇನ್​ ಮ್ಯಾಕ್ಸ್​ವೆಲ್​ ಆನೆ ಬಲ ತುಂಬುವ ಸಾಧ್ಯತೆ ಇದೆ. ಬರೋಬ್ಬರಿ 14.25 ಕೋಟಿ ರೂ.ಗೆ ಆರ್​ಸಿಬಿ ಬಳಗ ಸೇರಿರುವ ಮ್ಯಾಕ್ಸ್​ವೆಲ್​ ಈಗಾಗಲೇ ತಯಾರಿ ನಡೆಸ್ತಿದ್ದು, ಆರ್​ಸಿಬಿ ಜರ್ಸಿ ಹಾಕಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಇದರ ಫೋಟೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಶೇರ್​ ಮಾಡಿ ಕೊಂಡಿದೆ.

ಇದನ್ನೂ ಓದಿ: ನಾಯಕತ್ವ ಜವಾಬ್ದಾರಿ ಪಂತ್​ಗೆ ಚೆನ್ನಾಗಿ ಹೊಂದಿಕೊಳ್ಳಲಿದೆ: ಪಾಂಟಿಂಗ್ ಭರವಸೆ

2014ರಲ್ಲಿ ಪಂಜಾಬ್​ ತಂಡ ಸೇರಿದ್ದ ಈ ಪ್ಲೇಯರ್​​ 16 ಪಂದ್ಯಗಳಿಂದ 552 ರನ್​ಗಳಿಕೆ ಮಾಡಿದ್ದರು. ಒಟ್ಟು 82 ಐಪಿಎಲ್​ ಪಂದ್ಯಗಳನ್ನಾಡಿರುವ ಮ್ಯಾಕ್ಸ್​ವೆಲ್​​ 1,505 ರನ್​ಗಳಿಕೆ ಮಾಡಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದ ಇವರು 13 ಪಂದ್ಯಗಳಿಂದ ಕೇವಲ 108 ರನ್​ಗಳಿಸಿದ್ದರು. ಜತೆಗೆ ಒಂದೇ ಒಂದು ಸಿಕ್ಸರ್​ ಸಹ ಸಿಡಿಸಿರಲಿಲ್ಲ. ಹೀಗಾಗಿ ಪಂಜಾಬ್​ ಕೈಬಿಟ್ಟಿತ್ತು. ಇವರ ಮೇಲೆ ಕಣ್ಣಿಟ್ಟಿದ್ದ ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡಿದ್ದು, ಇದೀಗ ಮಿಂಚು ಹರಿಸುವ ವಿಶ್ವಾಸದಲ್ಲಿದ್ದಾರೆ.

ಏಪ್ರಿಲ್​ 9ರಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ. ತಂಡದಲ್ಲಿ ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​, ದೇವದತ್ ಪಡಿಕ್ಕಲ್​, ನವದೀಪ್​ ಸೈನಿ, ಪವನ್ ನೇಗಿ, ವಾಷಿಂಗ್ಟನ್​​ ಸುಂದರ್​, ಚಹಾಲ್​, ಮೊಹಮ್ಮದ್​ ಸಿರಾಜ್​ ಸೇರಿದಂತೆ ಅನೇಕ ಪ್ಲೇಯರ್ಸ್​​ ಇದ್ದಾರೆ.

Last Updated : Apr 6, 2021, 6:01 PM IST

ABOUT THE AUTHOR

...view details