ಮುಂಬೈ :ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 7 ವಿಕೆಟ್ಗಳಿಂದ ಸೋಲು ಕಂಡ ಬೇಸರದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಸೋಲಿನ ಕಹಿ ಜೊತೆಗೆ 12 ಲಕ್ಷ ರೂ. ದಂಡ ಕಟ್ಟಬೇಕಾದ ಪರಿಸ್ಥಿತಿ ಇದೆ.
ಶನಿವಾರ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶನಕ್ಕಾಗಿ ಸಿಎಸ್ಕೆ ನಾಯಕ ಧೋನಿಗೆ ಐಪಿಎಲ್ ಆಡಳಿತ ಮಂಡಳಿ 12 ಲಕ್ಷ ರೂ. ದಂಡ ವಿಧಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತ್ತು.
ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 18.4 ಓವರ್‌ಗಳಲ್ಲಿ ತಲುಪಿ ಶುಭಾರಂಭ ಮಾಡಿತು. ಪೃಥ್ವಿ ಶಾ ಮತ್ತು ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ತಡೆಯಲು ಹರಸಾಹಸಪಟ್ಟ ಧೋನಿ ಒತ್ತಡಕ್ಕೊಳಗಾಗಿ, ಓವರ್ ಮುಗಿಸಲು ನಿಗದಿತ 90 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರು.
"ಕನಿಷ್ಠ ಓವರ್-ರೇಟ್ ಐಪಿಎಲ್ನ ನೀತಿ ಸಂಹಿತೆಯಡಿಯಲ್ಲಿ ಇದು ಸಿಎಸ್ಕೆ ತಂಡದ ಮೊದಲ ಅಪರಾಧವಾಗಿದೆ. ನಾಯಕ ಧೋನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನು ಓದಿ: 2 ವರ್ಷದ ನಂತರ ಕಮ್ಬ್ಯಾಕ್ ಮಾಡಿದ ಪಂದ್ಯದಲ್ಲೇ ಕೊಹ್ಲಿ-ರೋಹಿತ್ ದಾಖಲೆ ಸರಿಗಟ್ಟಿದ ರೈನಾ