ಚೆನ್ನೈ:ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಕೆಲವೊಂದು ಕ್ಷೇತ್ರಗಳು ಆರ್ಥಿಕವಾಗಿ ತತ್ತರಿಸಿ ಹೋಗಿವೆ. ಇದರ ಮಧ್ಯೆ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಹರಾಜುಗೊಳ್ಳುತ್ತಿರುವ ಪ್ಲೇಯರ್ಸ್ಗಳ ಮೇಲೆ ಲಕ್ಷ್ಮಿ ಕಟಾಕ್ಷ ಜೋರಾಗಿದೆ.
ಓದಿ: 5.25 ಕೋಟಿ ರೂ. ನೀಡಿ 'ಶಾರುಖ್ ಖಾನ್' ಖರೀದಿಸಿದ ಪ್ರೀತಿ ಜಿಂಟಾ... ಯಾರು ಈ ಪ್ಲೇಯರ್!?
ಪ್ರಸಕ್ತ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಪ್ಲೇಯರ್ಸ್ ಜೊತೆಗೆ ಕೆಲ ಅನ್ಕ್ಯಾಪ್ಡ್ ಪ್ಲೇಯರ್ಸ್ ಭರ್ಜರಿಯಾಗಿ ಸೇಲ್ ಆಗಿದ್ದು, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಕೃಷ್ಣಪ್ಪ ಗೌತಮ್ ಬರೋಬ್ಬರಿ 9.75 ಕೋಟಿ ರೂಗೆ ಸೇಲ್ ಆಗಿದ್ರೆ, ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ 24 ವರ್ಷದ ಅನ್ಕ್ಯಾಪ್ಡ್ ಪ್ಲೇಯರ್ ರಿಲೆ ಮೆರೆಡಿತ್ 8 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 40 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಈ ಆಲ್ರೌಂಡರ್ ಪ್ಲೇಯರ್ಸ್ಗೆ ಪಂಜಾಬ್ 8 ಕೋಟಿ ರೂ ನೀಡಿದೆ. ಈ ಪ್ಲೇಯರ್ ಖರೀದಿ ಮಾಡಲು ಡೆಲ್ಲಿ ತಂಡ ಕೂಡ ಪೈಪೋಟಿ ನಡೆಸಿತು. ಬಿಗ್ ಬ್ಯಾಶ್ ಲೀಗ್ನಲ್ಲಿ ಹೊಬಾರ್ಟ್ ಹರಿಕೆನ್ಸ್ ತಂಡದ ಪರ 34 ಪಂದ್ಯಗಳನ್ನಾಡಿರುವ ಈ ಪ್ಲೇಯರ್ 43 ವಿಕೆಟ್ ಕಬಳಿಕೆ ಮಾಡಿ ಮಿಂಚು ಹರಿಸಿದ್ದರು. ಇನ್ನು ಮತ್ತೋರ್ವ ಅನ್ಕ್ಯಾಪ್ಡ್ ಪ್ಲೇಯರ್ ಶಾರುಖ್ ಖಾನ್ಗೆ 5.25 ಕೋಟಿ ರೂ. ನೀಡಿ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡ ಖರೀದಿ ಮಾಡಿದೆ.