ಕರ್ನಾಟಕ

karnataka

ETV Bharat / sports

14ನೇ ಐಪಿಎಲ್ ಮಿನಿ ಹರಾಜಿಗೆ ದಿನಾಂಕ ಫಿಕ್ಸ್​ ಮಾಡಿದ ಬಿಸಿಸಿಐ - ಚೆನ್ನೈನಲ್ಲಿ ಐಪಿಎಲ್ ಮಿನಿ ಹರಾಜು

ಪ್ರಸ್ತುತ ನಡೆಯುತ್ತಿರುವ ದೇಶೀಯ ಸ್ಪರ್ಧೆಗಳು ಯಶಸ್ವಿಯಾಗಿ ಮುಗಿದ್ರೆ ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐಗೆ ವಿಶ್ವಾಸ ಹೆಚ್ಚಾಗಲಿದೆ. ಯುಎಇ ಕೂಡ ಬಿಸಿಸಿಐ ಮುಂದಿರುವ ಮತ್ತೊಂದು ಆಯ್ಕೆಯಾಗಿದೆ. ಆದರೆ, ಐಪಿಎಲ್‌ನ ಭಾರತದಲ್ಲೇ ನಡೆಸುವುದಕ್ಕೆ ನಮ್ಮ ಮೊದಲ ಆದ್ಯತೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..

14ನೇ ಐಪಿಎಲ್ ಮಿನಿ ಹರಾಜು
14ನೇ ಐಪಿಎಲ್ ಮಿನಿ ಹರಾಜು

By

Published : Jan 27, 2021, 3:18 PM IST

ಚೆನ್ನೈ :2021ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೂ ಮುನ್ನ ನಡೆಯಲಿರುವ ಮಿನಿ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಖಚಿತಪಡಿಸಿದೆ.

ಇಂದು ಟ್ವಿಟರ್​ ಮೂಲಕ ಐಪಿಎಲ್ ಮಂಡಳಿ ಈ ವಿಚಾರವನ್ನು ದೃಢಪಡಿಸಿದೆ. "ಐಪಿಎಲ್ ಪ್ಲೇಯರ್ ಆ್ಯಕ್ಷನ್​ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ. ಈ ವರ್ಷದ ಆ್ಯಕ್ಷನ್​ಗೆ ನೀವು ಎಷ್ಟು ಉತ್ಸುಕರಾಗಿದ್ದೀರಾ?" ಎಂದು ಬರೆದುಕೊಂಡಿದೆ.

ಈ ವರ್ಷದ ಟೂರ್ನಮೆಂಟ್​ ನಡೆಯುವ ಸ್ಥಳದ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಗದು ಸಮೃದ್ಧ ಲೀಗ್‌ ಭಾರತದಲ್ಲೇ ನಡೆಸಬೇಕೆಂಬುದು ಬಿಸಿಸಿಐನ ಆಶಯವಾಗಿದೆ. ಆದರೆ, ಇನ್ನೂ ಕೆಲ ದಿನಗಳ ನಂತರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.

ಪ್ರಸ್ತುತ ನಡೆಯುತ್ತಿರುವ ದೇಶೀಯ ಸ್ಪರ್ಧೆಗಳು ಯಶಸ್ವಿಯಾಗಿ ಮುಗಿದ್ರೆ ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐಗೆ ವಿಶ್ವಾಸ ಹೆಚ್ಚಾಗಲಿದೆ. ಯುಎಇ ಕೂಡ ಬಿಸಿಸಿಐ ಮುಂದಿರುವ ಮತ್ತೊಂದು ಆಯ್ಕೆಯಾಗಿದೆ. ಆದರೆ, ಐಪಿಎಲ್‌ನ ಭಾರತದಲ್ಲೇ ನಡೆಸುವುದಕ್ಕೆ ನಮ್ಮ ಮೊದಲ ಆದ್ಯತೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2020ರ ಐಪಿಎಲ್​ನ ಯುಎಇ ಆಶ್ರಯದಲ್ಲೂ ಬಿಸಿಸಿಐ ಅದ್ದೂರಿಯಾಗಿ ನಡೆಸಿತ್ತು. ಎಲ್ಲಾ ತಂಡಗಳಿಗೂ ಪ್ರತ್ಯೇಕ ಬಯೋಬಬಲ್​ ಸೃಷ್ಟಿಸಿ ಯಾರಿಗೂ ಕೊರೊನಾದಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿತ್ತು. ಕೇವಲ ಕೊರೊನಾ ಪರೀಕ್ಷೆಗೆಂದೇ 10 ಕೋಟಿ ರೂ.ಖರ್ಚು ಮಾಡಿತ್ತು.

ಇದನ್ನು ಓದಿ:ಎದೆ ನೋವು: ಮತ್ತೆ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಗಂಗೂಲಿ

ABOUT THE AUTHOR

...view details