ಚೆನ್ನೈ:ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಲೀಗ್ನ 14ನೇ ಆವೃತ್ತಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವಿವಿಧ ಪ್ರಾಂಚೈಸಿಗಳು ತಮ್ಮ ತಂಡ ಬಲಿಷ್ಠಗೊಳಿಸುವ ಉದ್ದೇಶದಿಂದ ಸ್ಟಾರ್ ಪ್ಲೇಯರ್ಸ್ ಮೇಲೆ ಕಣ್ಣು ಹಾಕಿ ಖರೀದಿ ಮಾಡುತ್ತಿವೆ.
ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಪ್ರಾಂಚೈಸಿಗಳು ವಿದೇಶಿ ಆಟಗಾರರ ಖರೀದಿ ಮಾಡ್ತಿದ್ದು, ಪ್ರಮುಖವಾಗಿ ಆಸ್ಟ್ರೇಲಿಯಾ ಪ್ಲೇಯರ್ಸ್ ಜಾಕ್ಪಾಟ್ ಹೊಡೆದಿದ್ದಾರೆ.
ವಿದೇಶಿ ಪ್ಲೇಯರ್ಸ್ಗೆ ಜಾಕ್ಪಾಟ್
- ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್, 16.25 ಕೋಟಿ (ರಾಜಸ್ಥಾನ ರಾಯಲ್ಸ್)
- ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ವೆಲ್, 14.25 ಕೋಟಿ ರೂ (ಆರ್ಸಿಬಿ)
- ಆಸ್ಟ್ರೇಲಿಯಾದ ಜೇ ರಿಚರ್ಡ್ಸನ್, 14 ಕೋಟಿ ರೂ (ಪಂಜಾಬ್)
- ಆಸ್ಟ್ರೇಲಿಯಾದ ನಾಥನ್ ಕೌಲ್ಟರ್ ನೆಲ್, 5 ಕೋಟಿ ರೂ. (ಮುಂಬೈ)
- ಇಂಗ್ಲೆಂಡ್ ಮೊಯಿನ್ ಅಲಿ, 7 ಕೋಟಿ ರೂ (ಚೆನ್ನೈ ಸೂಪರ್ ಕಿಂಗ್ಸ್)
- ನ್ಯೂಜಿಲ್ಯಾಂಡ್ನ ಆಡಂ ಮಿಲ್ನೆ, 3.20 ಕೋಟಿ ರೂ (ಮುಂಬೈ ಇಂಡಿಯನ್ಸ್)
- ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, 3.20 ಕೋಟಿ ರೂ (ಕೊಲ್ಕತ್ತಾ)
- ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್, 2.2 ಕೋಟಿ ರೂ (ಡೆಲ್ಲಿ ಕ್ಯಾಪಿಟಲ್ಸ್)
- ಇಂಗ್ಲೆಂಡ್ ಡೇವಿಡ್ ಮಲನ್, 1.5 ಕೋಟಿ (ಪಂಜಾಬ್)
- ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ 1 ಕೋಟಿ ರೂ (ರಾಜಸ್ಥಾನ)
ಓದಿ: ಐಪಿಎಲ್ ಹರಾಜು: ಗಮನ ಸೆಳೆದ ಶಾರೂಖ್ ಮಗ ಆರ್ಯನ್, ಜೂಹಿ ಚಾವ್ಲಾ ಮಗಳು ಜಾನ್ವಿ!
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬರುವ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿದ್ದು, ಅದಕ್ಕಾಗಿ ಎಲ್ಲ ಪ್ರಾಂಚೈಸಿಗಳು ತಮ್ಮ ತಮ್ಮ ತಂಡ ಬಲಿಷ್ಠ ಮಾಡಿಕೊಳ್ಳುತ್ತಿವೆ.