ಕರ್ನಾಟಕ

karnataka

ETV Bharat / sports

ಐಪಿಎಲ್ ಸಂಭಾವನೆಯಲ್ಲಿ ಶತಕ ಗಳಿಸಿದ ಎಬಿಡಿ: ನೂರು ಕೋಟಿ ಕ್ಲಬ್ ಸೇರಿದ ಮೊದಲ ವಿದೇಶಿ ಕ್ರಿಕೆಟಿಗ - ಐಪಿಎಲ್​ನಲ್ಲಿ 100 ಕೋಟಿ ಗಳಿಸಿದ ಎಬಿಡಿ

ಡಿ ವಿಲಿಯರ್ಸ್ ಅವರ ಪ್ರಸ್ತುತ ಒಪ್ಪಂದವು ಒಂದು ಸೀಸನ್​ಗೆ 11 ಕೋಟಿ ರೂಪಾಯಿ. 2021ರ ಐಪಿಎಲ್ ಒಪ್ಪಂದದೊಂದಿಗೆ, ಡಿ ವಿಲಿಯರ್ಸ್ ಫ್ರಾಂಚೈಸಿಗಳಿಂದ ಪಡೆದ ಒಟ್ಟು ಸಂಭಾವನೆ 102.5 ಕೋಟಿ ರೂ. ಎನ್ನಲಾಗಿದೆ.

AB de Villiers
ಎಬಿ ಡಿ ವಿಲಿಯರ್ಸ್

By

Published : Jan 23, 2021, 12:53 PM IST

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಕೆಲವು ದಿನಗಳ ಹಿಂದೆ 2021 ರ ಸೀಸನ್​ನಲ್ಲಿ ತಾವು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಹೆಸರನ್ನು ಪ್ರಕಟಿಸಿದ್ದು, ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಆರ್​ಸಿಬಿ ತಂಡದಲ್ಲೇ ಉಳಿದುಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 10 ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿತ್ತು. ಆದರೆ, ತಮ್ಮ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್ ಮುಂತಾದವರನ್ನು ಉಳಿಸಿಕೊಂಡಿದ್ದಾರೆ.

ಒಪ್ಪಂದದ ವಿಸ್ತರಣೆ ಮೂಲಕ ಆಟಗಾರರನ್ನು ಖರೀದಿಸಿದ ಬೆಲೆಗೆ ಅವರ ಪ್ರಸ್ತುತ ವ್ಯವಹಾರಗಳಲ್ಲಿ ಹೆಚ್ಚುವರಿ ವರ್ಷವನ್ನು ನೀಡಲಾಯಿತು. ಆರ್​ಸಿಬಿ ತಂಡದಲ್ಲೇ ಉಳಿದುಕೊಂಡಿರುವ ಡಿ ವಿಲಿಯರ್ಸ್ ಐಪಿಎಲ್​ ಲೀಗ್ ಇತಿಹಾಸದಲ್ಲಿ 100 ಕೋಟಿ ರೂ. ಗಳಿಸಿದ ಅಗ್ರ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ.

ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಸುರೇಶ್ ರೈನಾ ನೂರು ಕೋಟಿ ಕ್ಲಬ್ ಸೇರಿದ ಆಟಗಾರರ ಎನಿಸಿದ್ದರು. ಇದೀಗ ಈ ಪಟ್ಟಿಗೆ ಎಬಿಡಿ ಎಂಟ್ರಿ ಕೊಟ್ಟಿದ್ದು, ಐಪಿಎಲ್​ನಲ್ಲಿ ಸಂಭಾವನೆ ಮೂಲಕ 100 ಕೋಟಿ ರೂಪಾಯಿ ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಡಿ ವಿಲಿಯರ್ಸ್ ಅವರ ಪ್ರಸ್ತುತ ಒಪ್ಪಂದವು ಒಂದು ಸೀಸನ್​ಗೆ 11 ಕೋಟಿ ರೂಪಾಯಿ. 2021ರ ಐಪಿಎಲ್ ಒಪ್ಪಂದದೊಂದಿಗೆ, ಡಿವಿಲಿಯರ್ಸ್ ಫ್ರಾಂಚೈಸಿಗಳಿಂದ ಪಡೆದ ಒಟ್ಟು ಸಂಭಾವನೆ 102.5 ಕೋಟಿ ರೂ. ಎನ್ನಲಾಗಿದೆ.

ಕಳೆದ ಸೀಸನ್​ನಲ್ಲಿ ಆರ್‌ಸಿಬಿ ಪರ158.74 ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟ್ ಬೀಸಿದ್ದ ಎಬಿಡಿ 454 ರನ್ ಗಳಿಸಿದ್ದು, 45.40 ಸರಾಸರಿ ಹೊಂದಿದ್ದರು.

ABOUT THE AUTHOR

...view details