ಅಬುಧಾಬಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 14 ತಿಂಗಳ ನಂತರ ಚುಟುಕು ಕ್ರಿಕೆಟ್ಗೆ ಮರಳುತ್ತಿದ್ದು, ಕೂಲ್ ಕ್ಯಾಪ್ಟನ್ರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಶನಿವಾರ ಧೋನಿ ನೇತೃತ್ವದ ಸಿಎಸ್ಕೆ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 13ನೇ ಆವೃತ್ತಿಯ ಐಪಿಎಲ್ನಲ್ಲಿ ಸೆಣಸಾಡುತ್ತಿದೆ. ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಹಬ್ಬದಂತಿದ್ದರೆ, 2019ರ ವಿಶ್ವಕಪ್ ನಂತರ ಮೈದಾನದಲ್ಲಿ ಘರ್ಜಿಸಲಿರುವ ಧೋನಿಯನ್ನು ಇಂದು ಸಾವಿರಾರು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.
ಧೋನಿ ಕಮ್ಬ್ಯಾಕ್ ಕುರಿತು ಪ್ರತಿಕ್ರಿಯಿಸಿರುವ ಸಿಎಸ್ಕೆ ಕೋಚ್ ಸ್ಟೆಪನ್ ಫ್ಲಮಿಂಗ್, " ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ. ಅವರು(ಧೋನಿ) ಫಿಟ್ ಆಗಿದ್ದು, ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ" ಎಂದು ತಿಳಿಸಿದ್ದಾರೆ.