ಕರ್ನಾಟಕ

karnataka

ETV Bharat / sports

'ಮುಂಬೈನಂತಹ ಬಲಿಷ್ಠ ತಂಡಕ್ಕೆ ಸೋಲುಣಿಸಿರುವುದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ' - MI vs SRH

ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಶಹ್ಬಾಜ್ ನದೀಮ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ತಂಡದ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 4 ಓವರ್​ಗಳಲ್ಲಿ ಕೇವಲ 19 ರನ್​ ನೀಡಿ ಸೂರ್ಯ ಕುಮಾರ್ ಯಾದವ್​ ಮತ್ತು ಕೃನಾಲ್ ಪಾಂಡ್ಯರನ್ನು ಒಂದೇ ಓವರ್​ನಲ್ಲಿ ಔಟ್​ ಮಾಡಿದ್ದರು.

ಶಹ್ಬಾಜ್ ನದೀಮ್​
ಶಹ್ಬಾಜ್ ನದೀಮ್​

By

Published : Nov 4, 2020, 5:07 PM IST

ಶಾರ್ಜಾ:ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ 10 ವಿಕೆಟ್​ಗಳಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಪ್ಲೇ ಆಫ್ ಪ್ರವೇಶಿಸಿದೆ.

ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಶಹ್ಬಾಜ್ ನದೀಮ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ತಂಡದ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 4 ಓವರ್​ಗಳಲ್ಲಿ ಕೇವಲ 19 ರನ್​ ನೀಡಿ ಸೂರ್ಯ ಕುಮಾರ್ ಯಾದವ್​ ಮತ್ತು ಕೃನಾಲ್ ಪಾಂಡ್ಯರನ್ನು ಒಂದೇ ಓವರ್​ನಲ್ಲಿ ಔಟ್​ ಮಾಡಿದ್ದರು.

ಈ ಪಂದ್ಯ ನಮಗೆ ಪ್ಲೇ ಆಫ್​ ದೃಷ್ಟಿಯಿಂದ ಪ್ರಮುಖವಾಗಿದ್ದರಿಂದ ನಮಗೆ ಸ್ವಲ್ಪ ಒತ್ತಡವಿತ್ತು. ಆದರೆ ನಾವು ಕಳೆದ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದರಿಂದ ಅದೇ ವಿಶ್ವಾಸದಲ್ಲಿ ಮುಂದುವರಿದೆವು ಎಂದು ಮುಂಬೈ ವಿರುದ್ಧ ಪಂದ್ಯ ಗೆದ್ದ ನಂತರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ನದೀಮ್ ಹೇಳಿದ್ದಾರೆ.

ನಾವು ಈ ಪಂದ್ಯವನ್ನು ಮತ್ತೊಂದು ಸಾಮಾನ್ಯ ಪಂದ್ಯದಂತೆ ಭಾವಿಸಿದ್ದೆವು. ಎಲ್ಲಾ ಆಟಗಾರರು ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ಧರಿಸಿದ್ದರಿಂದ ಗೆಲವು ನಮಗೆ ಸುಲಭವಾಯಿತು. ಮುಂಬೈನಂತಹ ಬಲಿಷ್ಠ ತಂಡವನ್ನು ಮಣಿಸಿದ ಮೇಲೆ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ತಂದುಕೊಟ್ಟಿದೆ ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನದೀಮ್​ ತಿಳಿಸಿದ್ದಾರೆ.

ಈ ಪಂದ್ಯವನ್ನು ಗೆಲ್ಲುತ್ತಿದಂತೆ ಸನ್​ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಶುಕ್ರವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ABOUT THE AUTHOR

...view details