ಕರ್ನಾಟಕ

karnataka

ETV Bharat / sports

ಬೈರ್ಸ್ಟೋವ್​ ಅರ್ಧಶತಕ: ಡೆಲ್ಲಿ ಕ್ಯಾಪಿಟಲ್​ಗೆ 163 ರನ್​ಗಳ ಟಾರ್ಗೆಟ್ ನೀಡಿದ ಹೈದರಾಬಾದ್​ - ಸನ್​ರೈಸರ್ಸ್​ ಹೈದರಾಬಾದ್​ vs ಡೆಲ್ಲಿ ಕ್ಯಾಪಿಟಲ್​ ವಿಶ್ಲೇಷಣೆ

ಹೈದರಾಬಾದ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್​ಗಳಿಸಿತು. ಡೆಲ್ಲಿಪರ ಅಮಿತ್​ ಮಿಶ್ರಾ 35ಕ್ಕೆ 2 ಹಾಗೂ ರಬಾಡ 21 ರನ್​ ನೀಡಿ 2 ವಿಕೆಟ್​ ಪಡೆದು ಹೈದರಾಬಾದ್​ ತಂಡದ ರನ್​ಗತಿಗೆ ಕಡಿವಾಣ ಹಾಕಿದರು.

ಬೈರ್ಸ್ಟೋವ್​ ಅರ್ಧಶತಕ
ಬೈರ್ಸ್ಟೋವ್​ ಅರ್ಧಶತಕ

By

Published : Sep 29, 2020, 9:44 PM IST

ಅಬುಧಾಬಿ:ಜಾನಿ ಬೈರ್ಸ್ಟೋವ್​ ಅರ್ಧಶತಕ ಹಾಗೂ ವಿಲಿಯಮ್ಸನ್​ 41 , ವಾರ್ನರ್​ ಅವರ 45 ರನ್​ಗಳ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಡೆಲ್ಲಿಕ್ಯಾಪಿಟಲ್​ಗೆ 163 ರನ್​ಗಳ ಸ್ಪರ್ಧಾತ್ಮಕ ರನ್​ಗಳ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್​(45) ಹಾಗೂ ಬೈರ್ಸ್ಟೋವ್​ ಮೊದಲ ವಿಕೆಟ್​ಗೆ 77 ರನ್​ಗಳ ಜೊತೆಯಾಟ ನೀಡಿದರು. 33 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 3 ಬೌಂಡರಿ ಸಹಿತ 45 ರನ್​ಗಳಿಸಿ ಮಿಶ್ರಾಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಮನೀಶ್​ ಪಾಂಡೆ 3 ರನ್​ಗಳಿಸಿ ಮಿಶ್ರಾಗೆ ಎರಡನೇ ಬಲಿಯಾದರು.

ಆದರೆ ಇಂದೇ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್​ ಹಾಗೂ ಬೈರ್ಸ್ಟೋವ್​ 3ನೇ ವಿಕೆಟ್​ಗೆ 52 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಬೈರ್ಸ್ಟೋವ್​ 48 ಎಸೆತಗಳಲ್ಲಿ 53, ಹಾಗೂ ವಿಲಿಯಮ್ಸನ್​ 26 ಎಸೆತಗಳಲ್ಲಿ 41 ರನ್​ಗಳಿಸಿದರು. ಜಮ್ಮುಕಾಶ್ಮೀರದ ಯುವ ಪ್ರತಿಭೆ ಅಬ್ಧುಲ್​ ಸಮದ್​ 7 ಎಸೆತಗಳಲ್ಲಿ 12 ರನ್​ಗಳಿಸಿದರು.

ಹೈದರಾಬಾದ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್​ಗಳಿಸಿತು. ಡೆಲ್ಲಿಪರ ಅಮಿತ್​ ಮಿಶ್ರಾ 35ಕ್ಕೆ 2 ಹಾಗೂ ರಬಾಡ 21 ರನ್​ ನೀಡಿ 2 ವಿಕೆಟ್​ ಪಡೆದು ಹೈದರಾಬಾದ್​ ತಂಡದ ರನ್​ಗತಿಗೆ ಕಡಿವಾಣ ಹಾಕಿದರು.

ABOUT THE AUTHOR

...view details