ದುಬೈ : ಇಂದು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕಾಪಿಟಲ್ಸ್ ತಂಡ ಸೆಣೆಸಲಿದೆ. ಡೆಲ್ಲಿ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಎದುರಾಳಿ ತಂಡವನ್ನ ಅಪಾಯಕಾರಿ ಎಂದು ಕರೆದಿದ್ದಾರೆ. ಆದರೂ ಆ ತಂಡವನ್ನು ಮಣಿಸಿ ಫೈನಲ್ಗೆ ಅರ್ಹತೆ ಪಡೆಯುವ ಸಾಮರ್ಥ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡ 57 ರನ್ಗಳ ಹೀನಾಯ ಸೋಲು ಕಂಡಿತ್ತು. ಇದೀಗ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈನಷ್ಟೇ ಬಲಿಷ್ಟ ತಂಡವನ್ನು ಹೊಂದಿರುವ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ, ಲೀಗ್ನಲ್ಲಿ ನಡೆದ 2 ಪಂದ್ಯಗಳಲ್ಲೂ ಡೆಲ್ಲಿ ಸೋಲು ಕಂಡಿದೆ.
ಅವರು ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಸೀಸನ್ನಲ್ಲಿ ಲೀಗ್ ಫಿನಿಶ್ ಮಾಡಿ ಪ್ಲೇಆಫ್ ತಲುಪಿದ ರೀತಿ ತುಂಬಾ ಉತ್ತಮವಾಗಿತ್ತು. ಕಳೆದ ರಾತ್ರಿಯ ಪಂದ್ಯದಲ್ಲೂ ಗೆದ್ದಿದ್ದಾರೆ. ಆ ತಂಡ ಬಲಿಷ್ಠವಾಗಿದ್ದು, ಅದರಲ್ಲಿ ಕೆಲವು ಅತ್ಯುತ್ತಮ ಬ್ಯಾಟ್ಸ್ಮನ್ಗಳಿದ್ದಾರೆ.