ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಚೀನಾ ಕಂಪನಿ ಪ್ರಾಯೋಜಕತ್ವ ಮುಂದುವರಿಕೆ: ಅಭಿಮಾನಿಗಳಿಂದ ಆಕ್ರೋಶ - ಐಪಿಎಲ್​ ಟೈಟಲ್​ ಪ್ರಾಯೋಜಕತ್ವ

ಸೆಪ್ಟೆಂಬರ್​ 19ರಿಂದ ನವೆಂಬರ್​ 10ರೊಳಗೆ ಐಪಿಎಲ್​ ಯುಎನಲ್ಲಿ​ ಆಯೋಜನೆ ಮಾಡಲಾಗುವುದೆಂದು ಭಾನುವಾರ ನಡೆದ ಐಪಿಎಲ್​ ಆಡಳಿತ ಮಂಡಳಿಯ ಸಭೆಯಲ್ಲಿ ಖಚಿತ ಪಡಿಸಲಾಗಿದೆ. ಇನ್ನು ಈ ಆವೃತ್ತಿಯಲ್ಲಿ ಎಲ್ಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಕೂಡ ತಿಳಿದು ಬಂದಿದೆ.

ಐಪಿಎಲ್​ 2020
ಐಪಿಎಲ್​ 2020

By

Published : Aug 3, 2020, 12:31 PM IST

ನವದೆಹಲಿ: ದೇಶದೆಲ್ಲೇ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆಕೊಡುತ್ತಿದ್ದರೆ ಇತ್ತ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ ತನ್ನ 13ನೇ ಆವೃತ್ತಿಯಲ್ಲಿ ಚೀನಾ ಮೊಬೈಲ್​ ಕಂಪನಿಯ ಪ್ರಾಯೋಜಕತ್ವ ಮುಂದುವರಿಸುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

ಸೆಪ್ಟೆಂಬರ್​ 19ರಿಂದ ನವೆಂಬರ್​ 10ರೊಳಗೆ ಐಪಿಎಲ್​ ಅನ್ನು ಯುಎಇನಲ್ಲಿ​ ಆಯೋಜನೆ ಮಾಡಲಾಗುವುದು ಎಂದು ಭಾನುವಾರ ನಡೆದ ಐಪಿಎಲ್​ ಆಡಳಿತ ಮಂಡಳಿಯ ಸಭೆಯಲ್ಲಿ ಖಚಿತ ಪಡಿಸಲಾಗಿದೆ. ಇನ್ನು ಈ ಆವೃತ್ತಿಯಲ್ಲಿ ಎಲ್ಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಕೂಡ ತಿಳಿದು ಬಂದಿದೆ.

ಐಪಿಎಲ್‌ ಟೈಟಲ್​ ಪ್ರಾಯೋಜಕತ್ವವನ್ನು ಚೀನಾ ಮೂಲಕದ ವಿವೋ ಮೊಬೈಲ್​ ಕಂಪನಿ ಪಡೆದಿದೆ. ಬಿಸಿಸಿಐ ವಿವೋ ಕಂಪನಿಯೊಂದಿಗೆ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ವರ್ಷ ಬಿಸಿಸಿಐ ಸುಮಾರು 440 ಕೋಟಿ ರೂ.ಗಳನ್ನು ವಿವೋ ಕಂಪನಿಯಿಂದ ಪಡೆಯುತ್ತಿದೆ.

ನಿನ್ನ ನಡೆದ ಸಭೆಯಲ್ಲಿ, " ಈ ಬಾರಿಯೂ ಎಲ್ಲ ಪ್ರಾಯೋಜಕರು ನಮ್ಮೊಂದಿಗಿದ್ದಾರೆ . ಈ ಮಾತಿನ ಒಳ ಅರ್ಥವನ್ನು ನೀವೇ ತಿಳಿದುಕೊಳ್ಳಬೇಕು "ಎಂದು ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿ ಐಪಿಎಲ್​ ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ. ದೇಶದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರ ಅಭಿಯಾನವಾಗುತ್ತಿರುವಾಗ ಐಪಿಎಲ್​ ಮಾತ್ರ ಚೀನಾ ಕಂಪನಿಯ ಪ್ರಾಯೋಜಕತ್ವ ಮುಂದುವರಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ABOUT THE AUTHOR

...view details