ಬೆಂಗಳೂರು: ಕೋವಿಡ್ 19 ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸೂಚಿಸಲು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2020ರ ಐಪಿಎಲ್ ಟೂರ್ನಿಯಲ್ಲಿ ‘ಮೈ ಕೋವಿಡ್ ಹೀರೋಸ್ ‘ ಎಂದು ಬರೆದಿರುವ ಜರ್ಸಿಯನ್ನು ತೊಟ್ಟು ಆಡಲಿದ್ದಾರೆ.
ಇಡೀ ಪಂದ್ಯವಾಳಿಯಲ್ಲಿ ತರಬೇತಿ ಮತ್ತು ಪಂದ್ಯಗಳ ವೇಳೆ ಆರ್ಸಿಬಿ ಮೈ ಕೋವಿಡ್ ಹೀರೋಸ್ ಸಂದೇಶ ಮುದ್ರಿತಗೊಂಡಿರುವ ಜರ್ಸಿಯನ್ನ ತನ್ನ ಆಟಗಾರರಿಗೆ ನೀಡಲಿದೆ. ಸಂಪೂರ್ಣ ಟೂರ್ನಿಯಲ್ಲಿ ಆಡಗಾರರು ಇದೇ ಜರ್ಸಿಗಳನ್ನು ತೊಟ್ಟು ಆಡಲಿದ್ದಾರೆ.
ಜೊತೆಗೆ ಈ ಋತುವಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಆಟಗಾರರು ಧರಿಸಿರುವ ಜರ್ಸಿಗಳ ಹರಾಜಿಗಿಡಲಿದ್ದು, ಅದರಿಂದ ಬರುವ ಹಣವನ್ನು ಕೋವಿಡ್ ವಿರುದ್ಧ ಹೋರಾಡುತ್ತಿರುವ ಫೌಂಡೇಶನ್‌ಗೆ ದೇಣಿಗೆಯಾಗಿ ನೀಡಲಿದೆ ಎಂದು ತಿಳಿದುಬಂದಿದೆ.
ಜೊತೆಗೆ ಆರ್ಸಿಬಿ ಆವೃತ್ತಿಯುದ್ದಕ್ಕೂ ಆಟಗಾರರು ಸಾಮಾಜಿಕ ಜಾಲಾತಾಣಗಳಲ್ಲಿ ಕೋವಿಡ್ ಹೀರೋಗಳಿಗೆ ಸಂಬಂಧಿಸಿದ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಲಕ್ಷಾಂತರ ಆರ್ಸಿಬಿ ಅಭಿಮಾನಿಗಳಿಗೆ ನೀವು ಹೀರೋಗಳಾಗುವಂತೆ ಪ್ರೇರೇಪಿಸಲಿದೆ.