ಕರ್ನಾಟಕ

karnataka

ETV Bharat / sports

ಅದ್ಭುತ ಬೌಲಿಂಗ್​ ಪ್ರದರ್ಶನ: ಸಿಎಸ್​ಕೆ ವಿರುದ್ಧ ಕೆಕೆಆರ್​ಗೆ 10 ರನ್​ಗಳ ರೋಚಕ ಜಯ - ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್​

ಕೆಕೆಆರ್​ ನೀಡಿದ 168 ರನ್​ಗಳ ಟಾರ್ಗೆಟ್​ ಬೆನ್ನೆತ್ತಿದ ಚೆನ್ನೈ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 157 ರನ್​ಗಳಿಸಿ 10 ರನ್​ಗಳ ಸೋಲನುಭಿಸಿತು.

ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್
ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್

By

Published : Oct 7, 2020, 11:57 PM IST

ಅಬುಧಾಬಿ: ಶೇನ್​ ವಾಟ್ಸನ್​ ಅರ್ಧಶತಕದ ಹೊರೆತಾಗಿಯೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 168 ರನ್​ಗಳನ್ನು ಬೆನ್ನಟ್ಟಲಾಗದೆ 10 ರನ್​ಗಳ ಸೋಲು ಕಂಡಿದೆ.

ಕೆಕೆಆರ್​ ನೀಡಿದ 168 ರನ್​ಗಳ ಟಾರ್ಗೆಟ್​ ಬೆನ್ನೆತ್ತಿದ ಚೆನ್ನೈ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 157 ರನ್​ಗಳಿಸಿ 10 ರನ್​ಗಳ ಸೋಲನುಭಿಸಿತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಶೇನ್​ ವಾಟ್ಸನ್​ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 50 ರನ್​ಗಳಿಸಿದರು. ಇವರು ಆರಂಭಿಕ ಫಾಫ್​ ಡು ಪ್ಲೆಸಿಸ್​ ಜೊತೆ ಮೊದಲ ವಿಕೆಟ್​ಗೆ 30ರನ್​ಗಳ ಜೊತೆಯಾಟ ನಡೆಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪ್ಲೆಸಿಸ್​ ಯುವ ಬೌಲರ್​ ಶಿವಂ ಮಾವಿಗೆ ವಿಕೆಟ್​ ಒಪ್ಪಿಸಿದರು.

ನಂತರ ಒಂದಾದ ರಾಯಡು ಹಾಗೂ ವಾಟ್ಸನ್​ 2ನೇ ವಿಕೆಟ್​ಗೆ 69 ರನ್​ಗಳ ಜೊತೆಯಾಟ ನೀಡಿದರು. ರಾಯುಡು 27 ಎಸೆತಗಳಲ್ಲಿ 3 ಬೌಂಡರಿ ಸಹಿತ 30 ರನ್​ಗಳಿಸಿ ನಾಗರಕೋಟಿಗೆ ವಿಕೆಟ್​ ಒಪ್ಪಿಸಿದರು. ರಾಯಡು ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ವಾಟ್ಸನ್​ ನರೈನ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ಆದರೆ ಇವರಿಬ್ಬರ ನಂತರ ಬಂದ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡಿದರು. ನಾಯಕ ಧೋನಿ 12 ಎಸೆತಗಳಲ್ಲಿ 11, ಸ್ಯಾಮ್​ ಕರ್ರನ್​ 11 ಎಸೆತಗಳಲ್ಲಿ 17 ರನ್​ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್​ ಒಪ್ಪಿಸಿದ್ದು ಸಿಎಸ್​ಕೆಗೆ ನುಂಗಲಾರದ ತುತ್ತಾಯಿತು.

ಇನ್ನು ಕೊನೆಯ 17 ಎಸೆತಗಳಿಗೆ 39 ರನ್​ಗಳ ಅಗತ್ಯವಿದ್ದರೂ ಜಾಧವ್​ ಬೌಂಡರಿಗಳಿಸಲಾಗದೆ ಪರದಾಡಿದರು. ಅವರು 12 ಎಸೆತಗಳಲ್ಲಿ ಕೇವಲ 7 ರನ್​ಗಳಿಸಿ ಔಟಾಗದೆ ಉಳಿದರು. ಜಡೇಜಾ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 21 ರನ್​ಗಳಿಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು.

ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್​ ತಂಡದ ಪರ ಶಿವಂ ಮಾವಿ 32 ಕ್ಕೆ 1, ವರುಣ್ ಚಕ್ರವರ್ತಿ 28ಕ್ಕೆ 1, ಕಮಲೇಶ್ ನಾಗರಕೋಟಿ 21ಕ್ಕೆ 1, ಸುನೀಲ್ ನರೈನ್ 31ಕ್ಕೆ 1 ಹಾಗೂ ಆ್ಯಂಡ್ರೆ ರಸೆಲ್ 18ಕ್ಕೆ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ABOUT THE AUTHOR

...view details