ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ವೇಗಿ ಅಂಕಿತ್ ರಜಪೂತ್ ರಾಜಸ್ಥಾನ ರಾಯಲ್ಸ್ಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿದ್ದ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ಗೆ ಮಾರಾಟವಾಗಿದ್ದಾರೆ.
ಎಡಗೈ ವೇಗಿಯಾಗಿರುವ ಅಂಕಿತ್ ರಜಪೂತ್ ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 5 ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ 3 ಬಾರಿ 5 ವಿಕೆಟ್ ಪಡೆದದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಇದೀಗ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ಪರ 2020 ರ ಐಪಿಎಲ್ ಆಡಲಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ನ ಟ್ರೆಂಟ್ ಬೌಲ್ಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಟ್ಟಿದೆ. ಇದೀಗ ಮುಂಬೈ ಏಕದಿನ ಕ್ರಿಕೆಟ್ ಟಾಪ್ ಬೌಲರ್ಗಳನ್ನು ತನ್ನಲ್ಲೇ ಸೇರಿಸಿಕೊಂಡಿದೆ. ಇದಲ್ಲದೇ ಮಲಿಂಗಾ ಕೂಡ ಮುಂಬೈ ತಂಡದಲ್ಲೇ ಇರುವುದರಿಂದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ.
ನವೆಂಬರ್ 14 ಆಟಗಾರರನ್ನು ರಿಲೀಸ್ ಮಾಡಲು ಕೊನೆಯ ದಿನಾಂಕವಾಗಿರುವುದರಿಂದ ಎಲ್ಲ ತಂಡಗಳು ಯಾವ ಆಟಗಾರರನ್ನು ತನ್ನಲ್ಲಿ ಉಳಿಸಿಕೊಳ್ಳಬೇಕು ಎನ್ನುವುದರಲ್ಲಿ ತಲ್ಲೀನವಾಗಿವೆ. ಇತ್ತೀಚೆಗೆ ರವಿಚಂದ್ರನ್ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಸೇರಿಕೊಂಡಿದ್ದರು. ಡೆಲ್ಲಿ ಕನ್ನಡಿಗ ಜಗದೀಶ್ ಸುಚೀತ್ ಅವರನ್ನು ಪಂಜಾಬ್ ಕಳುಹಿಸಿಕೊಟ್ಟಿತ್ತು.