ನವದೆಹಲಿ: 13ನೇ ಆವೃತ್ತಿಯ ದ್ವಿತಿಯಾರ್ಧದಲ್ಲಿ ಚೇಸಿಂಗ್ ಮಾಡುವುದಕ್ಕೆ ಏಕೆ ಸುಲಭವಾಗುತ್ತಿದೆ ಎಂಬ ಬಗ್ಗೆ ಭಾರತೀಯ ಕ್ರಿಕೆಟ್ನ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮೊದಲಾರ್ಧದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆಲುವು ಸಾಧಿಸಿದ್ದವು. ಆ ಸಂದರ್ಭದಲ್ಲಿ ಚೇಸಿಂಗ್ ಬಹಳ ಕಷ್ಟವಾಗುತ್ತಿತ್ತು. ಆದರೆ ದ್ವಿತೀಯಾರ್ಧದಲ್ಲಿ ಟ್ರೆಂಡ್ ಉಲ್ಟಾ ಆಗಿದ್ದು, ಕ್ರೀಡಾಂಗಣಗಳ ವಾತಾವರಣಕ್ಕೆ ವಿರುದ್ಧವಾಗಿ ಚೇಸಿಂಗ್ ಮಾಡುವ ತಂಡಗಳು ಸುಲಭವಾಗಿ ಜಯ ಸಾಧಿಸುತ್ತಿವೆ. ಈ ದಿಢೀರ್ ಬದಲಾವಣೆ ಹೇಗಾಯಿತು ಎಂಬ ಬಗ್ಗೆ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಚೇಸಿಂಗ್ ಪರಿಸ್ಥಿತಿ ದಿಢೀರ್ ಬದಲಾಣೆ ಕಾಣಲು ಯುಎಇನಲ್ಲಿ ಆಗುತ್ತಿರುವ ಹವಾಮಾನ ವೈಪರೀತ್ಯವೇ ಕಾರಣ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಟೂರ್ನಮೆಂಟ್ ಆರಂಭವಾದಾಗ ಎರಡನೇ ಇನ್ನಿಂಗ್ಸ್ ವೇಳೆ ಪಿಚ್ನ ತಾಪಮಾನ ಕಡಿಮೆಯಾಗುತ್ತಿತ್ತು. ನೀವು ಗಮನಿಸಿ, ಟೂರ್ನಮೆಂಟ್ನ ಮೊದಲಾರ್ಧದಲ್ಲಿ ಅದರಲ್ಲೂ ದುಬೈ ಮತ್ತು ಅಬುಧಾಬಿಯಲ್ಲಿ ಚೇಸಿಂಗ್ ಮಾಡುವ ತಂಡಗಳು ಯಶಸ್ವಿಯಾಗುತ್ತಿರಲಿಲ್ಲ. ಚೇಸಿಂಗ್ ಮಾಡುವ ತಂಡಗಳು ಸೋಲುತ್ತಿದ್ದವು. ಆದರೆ ಕಳೆದ 7-8 ದಿನಗಳ ನಂತರ ಚೇಸಿಂಗ್ ಮಾಡುವ ತಂಡಗಳು ಯಾವುದೇ ಕ್ರೀಡಾಂಗಣದಲ್ಲಾದರೂ ಗೆಲುವು ಸಾಧಿಸುತ್ತಿವೆ ಎಂದು ತಮ್ಮ 100 ಎಂಬಿ ಆ್ಯಪ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕೆ ಕಾರಣ ಸೂರ್ಯ ಈಗ ಬೇಗ ಮುಳಗುತ್ತಾನೆ. ಆದ್ದರಿಂದ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವಾಗ ಆರಂಭಿಕ ಪಂದ್ಯಗಳಲ್ಲಿ ಬೌಲರ್ಗಳಿಗೆ ನೆರವಾಗುವುದಕ್ಕಿಂತ ದ್ವಿತೀಯಾರ್ಧದಲ್ಲಿ ಹೆಚ್ಚು ನೆರವಾಗುತ್ತಿದೆ. ಆದ್ದರಿಂದ ಕಡಿಮೆ ರನ್ಗಳಿಗೆ ನಿಯಂತ್ರಿಸುತ್ತಿದ್ದಾರೆ. ಜೊತೆಗೆ ಮೊದಲಾದರೆ ಮೊದಲು ಇನ್ನಿಂಗ್ಸ್ ಆರಂಭಿಸುವ ತಂಡಗಳಿಗೆ ಚೆಂಡು ಹೆಚ್ಚು ಮೇಲೇಳುತ್ತಿತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಬ್ಬನಿ ಬೀಳುತ್ತಿರುವುದರಿಂದ ತಾಪಮಾನ ತಂಪಾಗುತ್ತದೆ ಎಂದು ಸಚಿನ್ ವಿವರವಾಗಿ ಹೇಳಿದ್ದಾರೆ.