ಕರ್ನಾಟಕ

karnataka

ETV Bharat / sports

ಕೆಕೆಆರ್ ಬಿಗಿ ಬೌಲಿಂಗ್​ ದಾಳಿಗೆ ಹೈರಾಣಾದ ಹೈದರಾಬಾದ್​: 143ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದ ವಾರ್ನರ್​ ಪಡೆ - Sunrisers Hyderabad vs Kolkata knight riders

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಹೈದರಾಬಾದ್​ ತಂಡ ಡೇವಿಡ್​ ವಾರ್ನರ್​ 36, ಮನೀಷ್ ಪಾಂಡೆ 51 ಹಾಗೂ ವೃದ್ಧಿಮಾನ್ ಸಹಾ ಅವರ 30 ರನ್​ಗಳ ನೆರವಿನಿಂದ 142 ರನ್​ಗಳಿಸಿದ್ದು, ಕೆಕೆಆರ್​ ಗೆಲುವಿಗೆ 143 ರನ್​ಗಳ ಟಾರ್ಗೆಟ್​ ನೀಡಿದೆ.

143ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದ ಹೈದರಾಬಾದ್​
143ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದ ಹೈದರಾಬಾದ್​

By

Published : Sep 26, 2020, 9:33 PM IST

Updated : Sep 26, 2020, 9:47 PM IST

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್​ ಬಿಗಿ ಬೌಲಿಂಗ್​ ದಾಳಿಗೆ ರನ್​ಗಳಿಸಲು ಹೆಣಗಾಡಿದ ಸನ್​ರೈಸರ್ಸ್​ ಹೈದರಾಬಾದ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 142 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಹೈದರಾಬಾದ್​ ತಂಡ ಡೇವಿಡ್​ ವಾರ್ನರ್​ 36, ಮನೀಷ್ ಪಾಂಡೆ 51 ಹಾಗೂ ವೃದ್ಧಿಮಾನ್ ಸಹಾ ಅವರ 30 ರನ್​ಗಳ ನೆರವಿನಿಂದ 142 ರನ್​ಗಳಿಸಿದ್ದು, ಕೆಕೆಆರ್​ ಗೆಲುವಿಗೆ 143 ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಇನ್ನಿಂಗ್ಸ್​ ಆರಂಭಿಸಿದ ಹೈದರಾಬಾದ್ ತಂಡಕ್ಕೆ ಕಮ್ಮಿನ್ಸ್​ 5 ರನ್​ಗಳಿಸಿದ್ದ ಬರ್ತಡೇ ಬಾಯ್ ಜಾನಿ ಬೈರ್ಸ್ಟೋವ್ ವಿಕೆಟ್ ​ಪಡೆದು ಆರಂಭಿಕ ಆಘಾತ ನೀಡಿದರು. ನಂತರ ನಾಯಕ ವಾರ್ನರ್​ ಜೊತೆಗೂಡಿದ ಮನೀಶ್ ಪಾಂಡೆ 2 ನೇ ವಿಕೆಟ್​ಗೆ 35 ರನ್​ ಸೇರಿಸಿದರು. ಈ ಇಬ್ಬರು ಬ್ಯಾಟ್ಸ್​ಮನ್​ಗಳು ವಿಕೆಟ್ ಕಾಯ್ದುಕೊಳ್ಳುವುದರತ್ತ ಗಮನ ನೀಡುತ್ತಿದ್ದರೆ, ಕೆಕೆಆರ್​ ರನ್​ ನಿಯಂತ್ರಿಸುವುದರ ಜೊತೆಗೆ ಒತ್ತಡವನ್ನೇರುವಲ್ಲಿ ಯಶಸ್ವಿಯಾಯಿತು.

ಈ ವೇಳೆ 30 ಎಸೆತಗಳಲ್ಲಿ 36 ರನ್​ಗಳಿಸಿದ್ದ ವಾರ್ನರ್​ರನ್ನು ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಅವರಿಗೆ ಕ್ಯಾಚ್​ ನೀಡಿ ಔಟಾದರು. ನಂತರ ಬಂದ ವೃದ್ಧಿಮಾನ್ ಸಹಾ ಪಾಂಡೆ ಜೊತೆಗೂಡಿ 3 ನೇ ವಿಕೆಟ್​ಗೆ 62 ರನ್​ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ಪಾಂಡೆ ರಸೆಲ್​ ಓವರ್​ನಲ್ಲಿ ಅವರಿಗೆ ಕ್ಯಾಚ್​ ನೀಡಿ ಔಟಾದರು. ಅವರು 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 51 ರನ್​ಗಳಿಸಿದರು.

ಕೆಕೆಆರ್​ ಸಂಘಟಿತ ಬೌಲಿಂಗ್ ದಾಳಿಗೆ ರನ್​ಗಳಿಸಲಾಗದೆ ಆರಂಭದಿಂದ ಕೊನೆಯವರೆಗೂ ಪರದಾಡಿದ ಸಹಾ 31 ಎಸೆತಗಳಲ್ಲಿ 30 ರನ್​ಗಳಿಸಿ ರನ್​ಔಟ್​ ಆದರು. ಮೊಹಮ್ಮದ್​ ನಬಿ 11 ರನ್​ಗಳಿಸಿದರು.

ಅಂತಿಮವಾಗಿ ಸನ್​ರೈಸರ್ಸ್​ 20 ಓವರ್​ಗಳ ಆಟದಲ್ಲಿ ಕೇವಲ 4 ವಿಕೆಟ್​ ಕಳೆದುಕೊಂಡು 142ರನ್​ಗಳಿಸಲಷ್ಟೆ ಶಕ್ತವಾಯಿತು. ಈ ಮೊತ್ತ ಇಡೀ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗಳಿಸಿದ ಕನಿಷ್ಠ ಮೊತ್ತವಾಯಿತು.​

ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್​ 19 ರನ್​ ನೀಡಿ 1 ವಿಕೆಟ್​, ಯುವ ಸ್ಪಿನ್ನರ್​ ವರುಣ್ ಚಕ್ರವರ್ತಿ 25 ರನ್​ ನೀಡಿ 1 ವಿಕೆಟ್ ಹಾಗೂ ರಸೆಲ್​ 16 ರನ್​ ನೀಡಿ 1 ವಿಕೆಟ್​ ಪಡೆದರು. ಉಳಿದ ಬೌಲರ್​ಗಳು ಕೂಡ ವಿಕೆಟ್​ ಪಡೆಯದಿದ್ದರೂ ರನ್​ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾದರು.

Last Updated : Sep 26, 2020, 9:47 PM IST

For All Latest Updates

TAGGED:

IPL 2020

ABOUT THE AUTHOR

...view details