ನವದೆಹಲಿ: ಐಪಿಎಲ್ 2020ರ ಹರಾಜಿಗೂ ಮುನ್ನ ಡೆಲ್ಲಿ ತಂಡ ಕೆಲ ಸೀನಿಯರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ತಂಡದ ನಾಯಕತ್ವ ಮಾತ್ರ ತಂಡದ ಯುವ ಆಟಗಾರ ಶ್ರೇಯಸ್ ಅಯ್ಯರ್ಗೆ ನೀಡಿದೆ.
ಕಳೆದೆರಡು ಆವೃತ್ತಿಗಳಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಹಾಗೂ ಕಳದೆರಡು ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಮುನ್ನಡೆಸಿದ್ದ ಆರ್ ಅಶ್ವಿನ್ರನ್ನು ಡೆಲ್ಲಿ ಕ್ಯಾಪಿಟಲ್ ಖರೀದಿಸಿತ್ತು. ಆದರೆ ಇವರಿಬ್ಬರಲ್ಲಿ ಯಾರಾದರೊಬ್ಬರನ್ನು ತಂಡದ ನಾಯಕರನ್ನಾಗಿ ಮಾಡಬಹುದು ಎನ್ನಲಾಗಿತ್ತು.
ಆದರೆ ಕಳೆದ ಬಾರಿ ಡೆಲ್ಲಿ ತಂಡವನ್ನು ಕ್ವಾಲಿಫೈಯರ್ಗೆ ಕೊಂಡೊಯ್ದಿದ್ದ ಅಯ್ಯರ್ ಅವರೇ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಖಚಿತಪಡಿಸಿದೆ.