ನವದೆಹಲಿ:ಆರ್.ಅಶ್ವಿನ್ ರಾಜಸ್ಥಾನ್ ರಾಯಲ್ಸ್ನ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡ್ ಮಾಡಿದ್ದು ಕಳೆದ ಐಪಿಎಲ್ನಲ್ಲಿ ಭಾರಿ ವಿವಾದಕ್ಕೀಡು ಮಾಡಿತ್ತು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಮಂಕಡ್ ನಡೆಯಲ್ಲ ಎಂದು ಡೆಲ್ಲಿ ಕ್ಯಾಪಿಟಲ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಬಟ್ಲರ್ರನ್ನು ಮಂಕಡ್ ಮಾಡಿದ್ದರಿಂದ ಕ್ರಿಕೆಟ್ ಲೋಕದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಕೆಲವರು ಅಶ್ವಿನ್ ವಿರುದ್ಧ ನಿಂತರೆ, ಇನ್ನೂ ಕೆಲವರು ಅಶ್ವಿನ್ ಕ್ರಿಕೆಟ್ ನಿಯಮಗಳನ್ನು ಅನುಸರಿಸಿ ಮಂಕಡ್ ಮಾಡಿದ್ದಾರೆ ಎಂದು ಪರವಾಗಿ ಮಾತನಾಡಿದ್ದರು.
'ಇದರಲ್ಲಿ ಸ್ಪಿರಿಟ್ ಆಫ್ ದಿ ಗೇಮ್ ಎಲ್ಲಿಂದ ಬರುತ್ತದೆ?' ಎಂದು ವಿವಾದದ ವೇಳೆ ಅಶ್ವಿನ್ ತನ್ನನ್ನು ಡಿಫೆಂಡ್ ಮಾಡಿಕೊಂಡಿದ್ದರು. ಅಲ್ಲದೆ 2020ರಲ್ಲೂ ಮಂಕಡ್ ಮಾಡಲಿದ್ದೀರಾ? ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ, ಅಶ್ವಿನ್ 'ಖಂಡಿತವಾಗಿಯೂ ಮಾಡುತ್ತೇನೆ' ಎಂದಿದ್ದರು.
ರಿಕಿ ಪಾಂಟಿಂಗ್ ಮತ್ತು ರಿಷಭ್ ಪಂತ್ ಈ ಕುರಿತು ಮಾತನಾಡಿರುವ ಪಾಂಟಿಂಗ್, ಈ ಕುರಿತು (ಮಂಕಡ್) ಅಶ್ವಿನ್ ಜೊತೆ ಮಾತನಾಡುತ್ತೇನೆ. ಕಳೆದ ವರ್ಷ ಅಶ್ವಿನ್ ನಮ್ಮ ತಂಡದಲ್ಲಿರಲಿಲ್ಲ. ನಾವು ಈ ವರ್ಷ ತಂಡಕ್ಕೆ ಕರೆತರಬೇಕೆಂದು ಉದ್ದೇಶಿಸಿದ್ದ ಆಟಗಾರರಲ್ಲಿ ಅವರೂ ಒಬ್ಬರು. ಅವರೊಬ್ಬ ಪ್ರತಿಭಾವಂತ ಬೌಲರ್. ದೀರ್ಘಕಾಲದಿಂದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಹೇಳಿದ್ದಾರೆ.
ಒಂದು ವೇಳೆ ಬ್ಯಾಟ್ಸ್ಮನ್ ಬೌಲರ್ ಚೆಂಡನ್ನು ಎಸೆಯುವ ಮುನ್ನ ಕ್ರೀಸ್ ಬಿಟ್ಟು ಹೊರಟರೆ ಆತನಿಗೆ ಕೆಲವು ರನ್ಗಳನ್ನು ಕಡಿತಗೊಳಿಸುವುದು/ಬೇರೆ ರೀತಿಯ ದಂಡ ವಿಧಿಸುವ ಹಾಗೆ ನಿಯಮಗಳನ್ನು ತಂದರೆ ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.