ಕರ್ನಾಟಕ

karnataka

ETV Bharat / sports

ಬಲಿಷ್ಠ ಡೆಲ್ಲಿ ವಿರುದ್ಧ ಪ್ಲೇ ಆಫ್ ಕನಸಿನಲ್ಲಿರುವ ಪಂಜಾಬ್ ಸವಾಲು - ಇಲೆವೆನ್ ಪಂಜಾಬ್ vs ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್ ಭವಿಷ್ಯ

ಎರಡೂ ತಂಡಗಳಿಗೆ ಇದು ತಿರುವು ನೀಡುವ ಪಂದ್ಯ. ಡೆಲ್ಲಿ ಗೆದ್ದರೆ ಮುಂದಿನ ಸುತ್ತು ಬಹುತೇಕ ಖಚಿತಗೊಳ್ಳಲಿದೆ. ಪಂಜಾಬ್‌ ಜಯಿಸಿದರೆ ಸ್ಪರ್ಧೆಯಲ್ಲಿ ಉಳಿಯಲಿದೆ.

ಡೆಲ್ಲಿ -ಪಂಜಾಬ್
ಡೆಲ್ಲಿ -ಪಂಜಾಬ್

By

Published : Oct 20, 2020, 6:01 PM IST

ದುಬೈ:ಸೋಲಿನ ಸರಪಳಿಯನ್ನು ಕಿತ್ತು ಬಿಸಾಡಿ ಬಲಿಷ್ಠ ತಂಡಗಳಾದ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳನ್ನು ಬಗ್ಗುಬಡಿದಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಮಂಗಳವಾರ ಅಗ್ರಸ್ಥಾನಿ ಡೆಲ್ಲಿ ವಿರುದ್ಧ ಕಣಕ್ಕಿಳಿಯುತ್ತಿದೆ.

ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿರುವ ರಾಹುಲ್ ನೇತೃತ್ವದ ತಂಡ ಕಳೆದ 2 ಪಂದ್ಯಗಳ ಗೆಲುವಿನ ಆತ್ಮವಿಶ್ವಾಸದಿಂದ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಈಗಾಗಲೆ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಪ್ರಬಲ ಪೈಪೋಟಿಯ ಹೊರೆತಾಗಿಯೂ ಸೂಪರ್ ಓವರ್​ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ಇದೀಗ ಸೇಡಿನ ಜೊತೆಗೆ ಪ್ಲೇ ಆಫ್​ ಗೆ ನಿರ್ಣಾಯಕ ಪಂದ್ಯವಾಗಿರುವುದರಿಂದ ಇಂದಿನ ಪಂದ್ಯ ಪಂಜಾಬ್ ತಂಡಕ್ಕೆ ಮಹತ್ವದ್ದಾಗಿದೆ.

ಆದರೆ ತಂಡದ ಬಹುದೊಡ್ಡ ದೌರ್ಬಲ್ಯವೆಂದರೆ ರಾಹುಲ್ ಹಾಗೂ ಮಯಾಂಕ್ ಅಗರ್​ವಾಲ್ ಹೊರೆತು ಪಡಿಸಿದರೆ ಬೇರೆ ಯಾವ ಬ್ಯಾಟ್ಸ್​ಮನ್​ಗಳು ಸ್ಥಿರಪ್ರದರ್ಶನ ತೋರದಿರುವುದು. ಆದರೆ ಕ್ರಿಸ್ ಗೇಲ್ ಬಂದಮೇಲೆ ಇವರಿಬ್ಬರ ಮೇಲಿನ ಒತ್ತಡ ಸ್ಪಲ್ಪ ಕಡಿಮೆಯಾಗಿದೆ. ಪೂರನ್ ಮತ್ತು ಮ್ಯಾಕ್ಸ್​ವೆಲ್ ತಮ್ಮ ಸಾಮರ್ಥ್ಯವನ್ನು ಇಂದಿನ ಪಂದ್ಯದಲ್ಲಾದರೂ ತೋರಿಸಿದರೆ ಪಂಜಾಬ್​ಗೆ ಗೆಲುವು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡಕ್ಕೆ ಈ ಪಂದ್ಯ ತನ್ನ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವತ್ತಾ ಗಮನ ಹರಿಸಿದೆ.

ಸ್ಥಿರತೆ ಕಾಣದೆ ಒದ್ದಾಡುತ್ತಿದ್ದ ಧವನ್ ಕಳೆದ ಮೂರು ಪಂದ್ಯಗಳಲ್ಲಿ 50 ಕ್ಕೂ ಹೆಚ್ಚುರನ್ ಬಾರಿಸಿ ಅದ್ಭುತ ಲಯದಲ್ಲಿದ್ದಾರೆ. ಶ್ರೇಯಸ್​ ಹಾಗೂ ಸ್ಟೋಯ್ನಿಸ್​ ಉತ್ತಮ ಪ್ರದರ್ಶನ ತೋರುವುದರಲ್ಲಿ ಯುಶಸ್ವಿಯಾಗಿದ್ದಾರೆ. ಆದರೆ ಯುವ ಆಟಗಾರ ಪೃಥ್ವಿ ಶಾ ಮತ್ತು ಅನುಭವಿ ರಹಾನೆಯಿಂದ ಕಳೆದ 2 ಪಂದ್ಯಗಳಿಂದ ರನ್​ಗಳಿಸಿದರೆ ವಿಕೆಟ್ ಒಪ್ಪಿಸಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

ಆದರೆ ಡೆಲ್ಲಿ ಬೌಲಿಂಗ್ ಟೂರ್ನಿಯಲ್ಲೇ ಬಲಿಷ್ಠವಾಗಿದ್ದು ತಂಡದ ಯಶಸ್ಸಿಗೆ ಕಾರಣವಾಗಿದೆ. ರಬಡಾ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಆಗಿದ್ದಾರೆ. ನಾರ್ಟ್ಜ್​ ತಮ್ಮ ವೇಗದ ಬೌಲಿಂಗ್​ನಿಂದ ಬ್ರೇಕ್ ಥ್ರೋ ನೀಡುತ್ತಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ತಮ್ಮ ಸ್ಥಿರ ಪ್ರದರ್ಶನದಿಂದ ಎದುರಾಳಿ ತಂಡಗಳ ರನ್​ಗತಿಗೆ ಕಡಿವಾಣ ಹಾಕುತ್ತಿದ್ದಾರೆ. ಈ ಬೌಲಿಂಗ್ ಘಟಕ ನಿಜಕ್ಕೂ ಪಂಜಾಬ್ ತಂಡಕ್ಕೆ ಕಬ್ಬಿಣದ ಕಡೆಲೆಯಾದರೆ ಅತಿಶಯೋಕ್ತಿಯಲ್ಲ.

ಡೆಲ್ಲಿ ಕ್ಯಾಪಿಟಲ್ಸ್:ಪೃಥ್ವಿ ಶಾ, ಶಿಖರ್ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್‌, ಅಲೆಕ್ಸ್ ಕ್ಯಾರಿ‌, ಅಕ್ಷರ್ ಪಟೇಲ್‌, ಆರ್‌. ಅಶ್ವಿನ್‌, ತುಷಾರ್‌ ದೇಶ್‌ಪಾಂಡೆ, ಕಗಿಸೊ ರಬಾಡ, ಎನ್ರಿಚ್‌ ನಾರ್ಟ್ಜ್

ಕಿಂಗ್ಸ್ ಇಲೆವವೆನ್ ಪಂಜಾಬ್‌: ಕೆ ಎಲ್ ರಾಹುಲ್‌ (ನಾಯಕ), ಮಯಾಂಕ್ ಅಗರ್‌ವಾಲ್‌, ಕ್ರಿಸ್ ಗೇಲ್‌, ನಿಕೋಲಸ್ ಪೂರನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ದೀಪಕ್ ಹೂಡಾ, ಕ್ರಿಸ್ ಜೋರ್ಡನ್‌, ಮುರುಗನ್ ಅಶ್ವಿನ್‌, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಆರ್ಶ್‌ದೀಪ್ ಸಿಂಗ್‌.

ABOUT THE AUTHOR

...view details