ಕರ್ನಾಟಕ

karnataka

ETV Bharat / sports

ಸಿಎಸ್​ಕೆ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ - ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಕೇದಾರ್​ ಜಾಧವ್​ ಬದಲಿಗೆ ತಮಿಳುನಾಡಿನ ಎನ್​ ಜಗದೀಶನ್​ ಅವರಿಗೆ ಅವಕಾಶ ನೀಡಿದೆ. ಆರ್​ಸಿಬಿಯಲ್ಲಿ ಕ್ರಿಸ್​ ಮೋರಿಸ್​ ಪದಾರ್ಪಣೆ ಮಾಡುತ್ತಿದ್ದಾರೆ. ಸಿರಾಜ್ ಬದಲಿಗೆ ಗುರುಕಿರಾತ್ ಮನ್​ಗೆ ಅವಕಾಶ ನೀಡಿದೆ.

ಸಿಎಸ್​ಕೆ  vs ಆರ್​ಸಿಬಿ
ಸಿಎಸ್​ಕೆ vs ಆರ್​ಸಿಬಿ

By

Published : Oct 10, 2020, 7:14 PM IST

Updated : Oct 10, 2020, 7:27 PM IST

ದುಬೈ:ಐಪಿಎಲ್​ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಟಾಸ್​ ಗೆದ್ದ ಆರ್​ಸಿಬಿ ತಂಡದ ನಾಯಕ ವಿರಾಟ್ ​ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಆಡಿರುವ 5 ಪಂದ್ಯಗಳಲ್ಲಿ 2 ಸೋಲು ಹಾಗೂ 3 ಗೆಲುವು ಪಡೆದಿರುವ ಆರ್​ಸಿಬಿ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರುವ ದಾವಂತದಲ್ಲಿದೆ. ಇತ್ತ ಸಿಎಸ್​ಕೆ ಆಡಿರುವ 6 ಪಂದ್ಯಗಳಲ್ಲಿ 4 ಸೋಲು ಹಾಗೂ ಕೇವಲ 2 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಕೇದಾರ್​ ಜಾಧವ್​ ಬದಲಿಗೆ ತಮಿಳುನಾಡಿನ ಎನ್​ ಜಗದೀಶನ್​ ಅವರಿಗೆ ಅವಕಾಶ ನೀಢಿದೆ. ಆರ್​ಸಿಬಿಯಲ್ಲಿ ಕ್ರಿಸ್​ ಮೋರಿಸ್​ ಪದಾರ್ಪಣೆ ಮಾಡುತ್ತಿದ್ದಾರೆ. ಸಿರಾಜ್ ಬದಲಿಗೆ ಗುರುಕಿರಾತ್ ಮನ್​ಗೆ ಅವಕಾಶ ನೀಡಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡ ಇಲ್ಲಿಯವರೆಗೆ 24 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ಆರ್​ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್​: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ, ವಿ.ಕೀ), ಸ್ಯಾಮ್ ಕರನ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಕರಣ್ ಶರ್ಮಾ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಕ್ರಿಸ್ ಮೋರಿಸ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಗುರ್ಕೀರತ್ ಸಿಂಗ್ ಮನ್, ನವದೀಪ್ ಸೈನಿ, ಯುಜವೇದ್ರ ಚಹಾಲ್

Last Updated : Oct 10, 2020, 7:27 PM IST

ABOUT THE AUTHOR

...view details