ಬೆಂಗಳೂರು:ದಿಢೀರ್ ಆಗಿ ತನ್ನ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ಗೊಂದಲ ಉಂಟು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೊಸ ಲೋಗೋ ಬಿಡುಗಡೆಗೊಳಿಸಿದೆ.
ಬದಲಾಯ್ತು ಆರ್ಸಿಬಿ ಲೋಗೋ... ಟ್ವಿಟ್ಟರ್ ಖಾತೆಯಲ್ಲೂ ಚೇಂಜ್ಯಾಯ್ತು ರಾಯಲ್ ಚಾಲೆಂಜರ್ಸ್ ! - ರಾಯಲ್ ಚಾಲೆಂಜರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಲು ಸಜ್ಜುಗೊಂಡಿರುವ ಆರ್ಸಿಬಿ ತಂಡ ಇದೀಗ ತನ್ನ ಲೋಗೋದಲ್ಲಿ ಕೆಲವೊಂದು ಬದಲಾವಣೆ ಮಾಡಿ, ಕಣಕ್ಕಿಳಿಯಲು ಸಜ್ಜಾಗಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸಖತ್ ತಯಾರಿ ನಡೆಸುತ್ತಿರುವ ಆರ್ಸಿಬಿ ದಿಢೀರ್ ಆಗಿ ಇನ್ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ಫೇಸ್ಬುಕ್ನಲ್ಲಿ ಹಾಕಿದ್ದ ಎಲ್ಲ ಫೋಟೋ ತೆಗೆದುಹಾಕಿ ಪ್ಲೇಯರ್ಸ್ ಹಾಗೂ ಕ್ರೀಡಾಭಿಮಾನಿಗಳಲ್ಲಿ ಶಾಖ್ ಮೂಡಿಸಿತ್ತು. ಇದೀಗ ಹೊಚ್ಚ ಹೊಸ ಲೋಗೋ ಬಿಡುಗಡೆಗೊಳಿಸಿದೆ. ಹೊಸ ಲೋಗೋ ವಿನ್ಯಾಸಗೊಳಿಸಿ ಟ್ವೀಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ನೀವು ಕಳೆದ ಅನೇಕ ದಿನಗಳಿಂದ ಕಾಯುತ್ತಿದ್ದ ದಿನ ಇದೀಗ ಬಂದಿದೆ. ಹೊಸ ದಶಕ, ಹೊಸ ಆರ್ಸಿಬಿ, ಹೊಸ ಲೋಗೋ ಎಂದು ಟ್ಟಿಟ್ಟರ್ನಲ್ಲಿ ಬರೆದುಕೊಂಡಿದೆ.
ಲೋಗೋದಲ್ಲಿ ಆಕ್ರಮಣಕಾರಿ ಹಾಗೂ ಕ್ರೀಡಾ ಮನೋಭಾವ ಎಂದು ಕಾಣುತ್ತಿದೆ ಎಂದು ಆರ್ಸಿಬಿ ಅಧ್ಯಕ್ಷ ಸಂಜೀವ್ ಚುರಿವಾಲ್ ಹೇಳಿದ್ದಾರೆ. 2008ರಿಂದಲೂ ಆರ್ಸಿಬಿ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗುತ್ತಿದ್ದು, ಇಲ್ಲಿಯವರೆಗೂ ಕಪ್ ಗೆದ್ದಿಲ್ಲ. ಆದರೆ, ಈ ಸಲ ಟ್ರೋಫಿ ಗೆಲ್ಲುವ ಉತ್ಸುಕದಲ್ಲಿದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದಿಟ್ಟುಕೊಂಡಿದ್ದ ತನ್ನ ಹೆಸರಿನಲ್ಲಿ ಕೇವಲ ರಾಯಲ್ ಚಾಲೆಂಜರ್ಸ್ ಎಂದು ಇಟ್ಟುಕೊಂಡಿದೆ.