ಹೈದರಾಬಾದ್:ಜಮೈಕಾ ಮೂಲದ ಅಥ್ಲಿಟ್ ಯೊಹಾನ್ ಬ್ಲೇಕ್ ಐಪಿಎಲ್ನಲ್ಲಿ ಆರ್ಸಿಬಿ ಇಲ್ಲವೇ ಕೆಕೆಆರ್ ಪರ ಆಡುವ ಆಸೆ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸದ್ಯ ಆರ್ಸಿಬಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದೆ.
ಉಸೇನ್ ಬೋಲ್ಟ್ ನಂತರದಲ್ಲಿ ಅತ್ಯಂತ ವೇಗದ ಓಟಗಾರ ಎನ್ನುವ ಹೆಗ್ಗಳಿಕೆ ಪಡೆದಿರುವ ಬ್ಲೇಕ್ ಕ್ರಿಕೆಟ್ ಒಲವಿಗೆ ಆರ್ಸಿಬಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ನೀವು ಆರ್ಸಿಬಿ ಪರ ಆಡಲು ಉತ್ಸುಕರಾಗಿದ್ದೀರಿ ಎನ್ನುವ ಮಾತು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ವೇಗದಷ್ಟೇ ಬೌಲಿಂಗ್ ಸಹ ಮಾಡಬಲ್ಲಿರಾದರೆ, ನಮ್ಮ ತಂಡದಲ್ಲಿ ಕಾಯಂ ಸ್ಥಾನವಿದೆ ಎಂದು ಆರ್ಸಿಬಿ ಟ್ವೀಟ್ ಮಾಡಿದೆ.
ಸಂದರ್ಶನವೊಂದರಲ್ಲಿ ತನ್ನ ಮನದಾಳ ಹಂಚಿಕೊಂಡಿದ್ದ ಯೊಹಾನ್ ಬ್ಲೇಕ್, 'ನಾನು ಹೆಚ್ಚು ಎಂದರೆ ಇನ್ನು 2 ವರ್ಷ ಟ್ರ್ಯಾಕ್ನಲ್ಲಿ ಓಡಬಹುದು ಅಷ್ಟೆ. ನಂತರ ನನ್ನ ಒಲವು ಕ್ರಿಕೆಟ್ನತ್ತ ಇದೆ ಎಂದಿದ್ದರು'.
ಆರ್ಸಿಬಿ ಅಥವಾ ಕೆಕೆಆರ್ನಲ್ಲಿ ಅವಕಾಶ ಬೇಕು.. ವಿಶ್ವದ ಶ್ರೇಷ್ಠ ಓಟಗಾರನಿಗೆ ಐಪಿಎಲ್ನಲ್ಲಿ ಮಿಂಚುವಾಸೆ..
'ನನಗೆ ವೆಸ್ಟ್ ಇಂಡೀಸ್ ತಂಡದ ಪರ ಆಡುವ ಆಸೆ ಇಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವ ಆಸೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಆಸೆ ಇದೆ. ಯಾಕೆಂದರೆ ಈ ಎರಡೂ ತಂಡದ ಪರ ಕ್ರಿಸ್ ಗೇಲ್ ಹೆಚ್ಚು ಪಂದ್ಯಗಳನ್ನ ಆಡಿದ್ದರು ಎಂದಿದ್ದಾರೆ. ಅಲ್ಲದೆ ನನಗೆ ಆರ್ಸಿಬಿ ತಂಡ ಎಂದರೆ ತುಂಬಾ ಇಷ್ಟ. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ನನ್ನ ನೆಚ್ಚಿನ ಆಟಗಾರರು' ಎಂದು ಯೊಹಾನ್ ಬ್ಲೇಕ್ ಹೇಳಿದ್ದರು.