ಕರ್ನಾಟಕ

karnataka

ETV Bharat / sports

ಚೆನ್ನೈ ವಿರುದ್ಧ ಹಸಿರು ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು - Royal challengers banglore

ಆರ್​ಸಿಬಿ ಈ ರೀತಿ ಹಸಿರುವ ಬಣ್ಣದ ಜರ್ಸಿ ತೊಡುತ್ತಿರುವುದು ಇದೇ ಮೊದಲೇನಲ್ಲ. 2011ರ ಆವೃತ್ತಿಯಿಂದಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಇದನ್ನು ರೂಢಿಸಿಕೊಂಡು ಬರುತ್ತಿದೆ..

ರಾಯಲ್ ಚಾಲೆಂಜರ್ಸ್​ ಬೆಂಗಳೂರು
ರಾಯಲ್ ಚಾಲೆಂಜರ್ಸ್​ ಬೆಂಗಳೂರು

By

Published : Oct 24, 2020, 4:39 PM IST

ದುಬೈ: ಭಾನುವಾರ ಸಿಎಸ್​ಕೆ ವಿರುದ್ಧ ನಡೆಯುವ 44ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರಿಸರ ಸಂರಕ್ಷಣೆಯ ಭಾಗವಾಗಿ ಕೆಂಪು ಮತ್ತು ಚಿನ್ನದ ಬಣ್ಣವುಳ್ಳ ಜರ್ಸಿಯ ಬದಲಾಗಿ ಹಸಿರುವ ಬಣ್ಣದ ಜರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮತ್ತು ಸಿಬ್ಬಂದಿ ಹಸಿರು ಬಣ್ಣದ ಜರ್ಸಿ ತೊಡಲಿದ್ದಾರೆ. ಆರ್​ಸಿಬಿ ಈ ರೀತಿ ಹಸಿರುವ ಬಣ್ಣದ ಜರ್ಸಿ ತೊಡುತ್ತಿರುವುದು ಇದೇ ಮೊದಲೇನಲ್ಲ. 2011ರ ಆವೃತ್ತಿಯಿಂದಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಇದನ್ನು ರೂಢಿಸಿಕೊಂಡು ಬರುತ್ತಿದೆ.

ನಾಳಿನ ಪಂದ್ಯದಲ್ಲಿ ಗ್ರಹಗಳ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಸಿರುವ ಜರ್ಸಿಯನ್ನು ತೊಟ್ಟು ಆಡಲಿದ್ದಾರೆ ಎಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ನಲ್ಲಿ ತಿಳಿಸಿದೆ.

ABOUT THE AUTHOR

...view details