ಕರ್ನಾಟಕ

karnataka

ETV Bharat / sports

ವಿಜಯ್ ಹಜಾರೆ, ಕೆಪಿಎಲ್​ ಸ್ಟಾರ್ ​ದೇವದತ್​ಗೆ ಆರ್​ಸಿಬಿಯಲ್ಲೂ ಅವಕಾಶ: ಮುನ್ಸೂಚನೆ ಕೊಟ್ಟ ಕೋಚ್​

2019ರ ಐಪಿಎಲ್​ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್​ ಪಡಿಕ್ಕಲ್​ರನ್ನು ಆರ್​ಸಿಬಿ 20 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು, ಪಡಿಕ್ಕಲ್ ಆಟದಲ್ಲಿ​ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಜೊತೆಗೆ ಸಮಯಕ್ಕೆ ತಕ್ಕ ಆಟವನ್ನೂ ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್​​ ರೂಢಿಸಿಕೊಂಡಿದ್ದಾರೆ.

​ದೇವದತ್ ಪಡಿಕ್ಕಲ್​
​ದೇವದತ್ ಪಡಿಕ್ಕಲ್​

By

Published : Aug 27, 2020, 6:13 PM IST

ಮುಂಬೈ: 2019-20 ಆವೃತ್ತಿಯ ದೇಶಿ ಕ್ರಿಕೆಟ್​ ಋತುವಿನಲ್ಲಿ ರನ್​ಗಳ ಹೊಳೆಯನ್ನೇ ಹರಿಸಿದ್ದ ಕರ್ನಾಟಕ ದೇವದತ್​ ಪಡಿಕ್ಕಲ್​ ಈ ಬಾರಿಯ ಐಪಿಎಲ್​ನಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

2019ರ ಐಪಿಎಲ್​ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್​ ಪಡಿಕ್ಕಲ್​ರನ್ನು ಆರ್​ಸಿಬಿ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಪಡಿಕ್ಕಲ್ ಆಟದಲ್ಲಿ​ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಜೊತೆಗೆ ಸಮಯಕ್ಕೆ ತಕ್ಕ ಆಟವನ್ನೂ ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್​​ ರೂಢಿಸಿಕೊಂಡಿದ್ದಾರೆ.

ತಂಡದ ಮುಖ್ಯ ಕೋಚ್​ ಆಗಿರುವ ಸೈಮನ್​ ಕ್ಯಾಟಿಚ್​ ಈಗಾಗಲೇ ಎಡಗೈ ಬ್ಯಾಟ್ಸ್​ಮನ್​ರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಆಲೋಚನೆ ಮಾಡಿದ್ದಾರೆ.

"ದೇವದತ್​ರ ಕಳೆದ ದೇಶಿ ಟೂರ್ನಿಗಳಲ್ಲಿ ಉತ್ತಮ ರನ್​ ಗಳಿಸಿದ್ದಾರೆ. ಜೊತೆಗೆ ಅವರು ಎಡಗೈ ಬ್ಯಾಟ್ಸ್​ಮನ್​ ಆಗಿರುವುದರಿಂದ ಇನ್ನಿಂಗ್ಸ್​ ಆರಂಭಿಸಲು ಸೂಕ್ತ ಬ್ಯಾಟ್ಸ್​ಮನ್​ ಎಂದು ನಾವು ಭಾವಿಸಿದ್ದೇವೆ. ಸಿಕ್ಕ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಳ್ಳಲಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಷಯ ಎಂದಿದ್ದಾರೆ.

19 ವರ್ಷದ ಪಡಿಕ್ಕಲ್​ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ 4 ಅರ್ಧಶತಕ ಸಹಿತ 310ರನ್ ​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಬಿಸಿಸಿಐ ಆಯೋಜನೆ ಮಾಡುವ ವಿಜಯ್​ ಹಜಾರೆ(ಏಕದಿನ) ಟ್ರೋಫಿಯಲ್ಲೂ ಪಡಿಕ್ಕಲ್​ ಅಬ್ಬರದ ಬ್ಯಾಟಿಂಗ್ ನಡೆಸಿ 2 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದರೆ, ಸಯ್ಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲೂ ಬರೋಬ್ಬರಿ 580 ರನ್​ ಗಳಿಸಿ ಮಿಂಚಿದ್ದರು.​

ABOUT THE AUTHOR

...view details