ಕರ್ನಾಟಕ

karnataka

ETV Bharat / sports

ಆರ್​ಸಿಬಿಗೆ ನೆಟ್​ ಬೌಲರ್​ ಆಗಲಿದ್ದಾರೆ ಶುಭಾಂಗ್ ಹೆಗ್ಡೆ, ಪ್ರತೀಕ್​ ಜೈನ್​.. - RCB net bowlers

ಪ್ರತೀಕ್​ ಜೈನ್​ ಕಳೆದ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಶುಭಾಂಗ್​ ಹೆಗ್ಡೆ ಒಂದು ಪ್ರಥಮ ದರ್ಜೆ ಹಾಗೂ 4 ಲಿಸ್ಟ್​ ಎ ಪಂದ್ಯಗಳನ್ನಾಡಿದ್ದಾರೆ..

ಆರ್​ಸಿಬಿಗೆ ನೆಟ್​ ಬೌಲರ್​
ಆರ್​ಸಿಬಿಗೆ ನೆಟ್​ ಬೌಲರ್​

By

Published : Sep 5, 2020, 9:51 PM IST

ಬೆಂಗಳೂರು :2020ರ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿದ್ದ ಕರ್ನಾಟಕದ ಯುವ ಆಲ್​ರೌಂಡರ್​ ಶುಭಾಂಗ್​ ಹೆಗ್ಡೆ ಆರ್​ಸಿಬಿಗೆ ನೆಟ್​ ಬೌಲರ್​ ಆಗಿ ದುಬೈಗೆ ಪ್ರಯಾಣಿಸಲಿದ್ದಾರೆ.

ಈ ವರ್ಷಾರಂಭದಲ್ಲಿ ಮುಗಿದ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಶುಭಾಂಗ್​ ಹೆಗ್ಡೆ, ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲೂ ಉತ್ತಮ ಹೆಸರು ಮಾಡಿದ್ದಾರೆ. ಕೆಪಿಎಲ್​ನ ಬಳ್ಳಾರಿ ಟಸ್ಕರ್ ಪರ ಆಡಿರುವ ಶುಭಾಂಗ್‌, ದ್ರಾವಿಡ್​ ಗರಡಿಯಲ್ಲಿ ಪಳಗಿದ್ದಾರೆ. ಕೆಲ ಪಂದ್ಯಗಳಲ್ಲಿ ಭಾರತದ ಕಿರಿಯರ ತಂಡ ಮುನ್ನಡೆಸಿದ್ದಾರೆ.

ಶುಭಾಂಗ್ ಹೆಗ್ಡೆ,

ಈ ಬಾರಿಯ ಐಪಿಎಲ್​ನಲ್ಲಿ 6 ಮಂದಿ ನೆಟ್​ ಬೌಲರ್​ಗಳಿದ್ದಾರೆ. ಈಗ ಮತ್ತೆ 5 ನೆಟ್​ ಬೌಲರ್​ಗಳನ್ನು ಬಳಸಿಕೊಳ್ಳಲು ಆರ್​ಸಿಬಿ ನಿರ್ಧರಿಸಿದೆ. ಇದರಲ್ಲಿ ಕರ್ನಾಟಕ ಪ್ರತೀಕ್​ ಜೈನ್​ ಹಾಗೂ ಶುಭಾಂಗ್​ ಹೆಗ್ಡೆ ಸೇರಿದ್ದಾರೆ. ಒಟ್ಟಾರೆ ಆರ್‌ಸಿಬಿ 11 ನೆಟ್​ ಬೌಲರ್​ಗಳನ್ನು ಹೊಂದಿದಂತಾಗಿದೆ. ಈಗಾಗಲೇ ಒಂದು ಗುಂಪು ಆಗಸ್ಟ್​ನಲ್ಲೇ ದುಬೈಗೆ ತೆರಳಿದ್ರೇ, ಮತ್ತೊಂದು ಗುಂಪು ಸೆಪ್ಟಂಬರ್​ 3ರಂದೇ ತೆರಳಿದೆ.

ಪ್ರತೀಕ್​ ಜೈನ್​ ಕಳೆದ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಶುಭಾಂಗ್​ ಹೆಗ್ಡೆ ಒಂದು ಪ್ರಥಮ ದರ್ಜೆ ಹಾಗೂ 4 ಲಿಸ್ಟ್​ ಎ ಪಂದ್ಯಗಳನ್ನಾಡಿದ್ದಾರೆ.

ಸೆಪ್ಟಂಬರ್​-19ರಿಂದ ಐಪಿಎಲ್​ ಮಹಾಸಮರ ಆರಂಭವಾಗಲಿದೆ. ಭಾನುವಾರ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಆರ್​ಸಿಬಿ ಯಾವ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ ಎಂದು ನೋಡುವುದಕ್ಕೆ ಸಹಸ್ರಾರು ಅಭಿಮಾನಿಗಳು ಕಾಯುತ್ತಿದ್ದಾರೆ.

ABOUT THE AUTHOR

...view details