ದುಬೈ: ಪಡಿಕ್ಕಲ್, ವಿಲಿಯರ್ಸ್ ಅರ್ಧಶತಕದ ಬಲ ಹಾಗೂ ಚಹಾಲ್, ನವದೀಪ್ ಸೈನಿ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ 10 ರನ್ಗಳ ರೋಚಕ ಜಯ ಸಾಧಿಸಿದೆ.
ಆರ್ಸಿಬಿ ನೀಡಿದ್ದ 164 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 153ರನ್ಗಳಿಗೆ ಆಲೌಟ್ ಆಗುವ ಮೂಲಕ 10 ರನ್ಗಳ ಸೋಲು ಕಂಡಿತು.
164 ರನ್ಗಳ ಗುರಿ ಬೆನ್ನತ್ತಿದ ಎಸ್ಆರ್ಹೆಚ್ 2ನೇ ಓವರ್ನಲ್ಲೇ ನಾಯಕ ಡೇವಿಡ್ ವಾರ್ನರ್(6) ವಿಕೆಟ್ ಕಳೆದುಕೊಂಡಿತು. ಆದರೆ 2 ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಕನ್ನಡಿಗ ಮನೀಷ್ ಪಾಂಡೆ ಹಾಗೂ ಜಾನಿ ಬೈರ್ಸ್ಟೋವ್ 71 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಮನೀಷ್ ಪಾಂಡೆ ಚಹಾಲ್ ಬೌಲಿಂಗ್ನಲ್ಲಿ ಸೈನಿಗೆ ಕ್ಯಾಚ್ ನೀಡಿ ಔಟಾದರು.
ಪದಾರ್ಪಣೆ ಮಾಡಿದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅರ್ಧಶತಕ ಸಾಧನೆ ಮಾಡಿದ ದೇವದತ್ ಪಡಿಕ್ಕಲ್
43 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 61 ರನ್ ಸಿಡಿಸಿ ಅಪಾಯದ ಮುನ್ಸೂಚನೆ ನೀಡಿದ್ದ ಬೈರ್ಸ್ಟೋವ್ರನ್ನು ಚಹಾಲ್ ಬೌಲ್ಡ್ ಮಾಡಿ ಆರ್ಸಿಬಿ ನಿಟ್ಟುಸಿರುವ ಬಿಡುವಂತೆ ಮಾಡಿದರು. ನಂತರದ ಎಸೆತದಲ್ಲೆ ಆಲ್ರೌಂಡರ್ ವಿಜಯ್ ಶಂಕರ್ರನ್ನು ಬೌಲ್ಡ್ ಮಾಡಿದ ಚಹಾಲ್ ಸೋಲಿನತ್ತ ಮುಖ ಮಾಡುತ್ತಿದ್ದ ಪಂದ್ಯವನ್ನು ಆರ್ಸಿಬಿಯತ್ತ ತಿರುಗಿಸಿದರು.
ನಂತರ 17 ನೇ ಓವರ್ನಲ್ಲಿ ಯುವ ಆಟಗಾರ ಪ್ರಿಯಂ ಗರ್ಗ್(7) ಶಿವಂ ದುಬೆ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಅದೇ ಓವರ್ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ರನ್ ಕದಿಯುವ ಬರದಲ್ಲಿ ರಶೀದ್ ಖಾನ್ಗೆ ಡಿಕ್ಕಿಹೊಡೆದು ರನ್ಔಟ್ ಆದರು. 18 ನೇ ಓವರ್ನಲ್ಲಿ ವೈಡ್ ಮೂಲಕ 5 ರನ್ ಬಿಟ್ಟುಕೊಟ್ಟು ಒಂದು ಕ್ಷಣ ಆರ್ಸಿಬಿ ಆಟಗಾರರ ಮುಖದಲ್ಲಿ ಸೋಲಿನ ಛಾಯೆ ತರಿಸಿದ್ದ ಸೈನಿ, ಅದೇ ಓವರ್ನಲ್ಲಿ ಭುವನೇಶ್ವರ್ ಕುಮಾರ್(0), ರಶೀದ್ ಖಾನ್(6) ಬೌಲ್ಡ್ ಮಾಡುವ ಮೂಲಕ ಬೆಂಗಳೂರು ತಂಡಕ್ಕೆ ಗೆಲುವನ್ನು ಖಚಿತಗೊಳಿಸಿದರು.
ಆರ್ಸಿಬಿ ಪರ 200 ಸಿಕ್ಸರ್ ಸಿಡಿಸಿದ ಎಬಿಡಿ ವಿಲಿಯರ್ಸ್!!
12 ಎಸೆತಗಳಲ್ಲಿ ಗೆಲುವಿಗೆ 22 ರನ್ಗಳ ಅಗತ್ಯವಿದ್ದಾಗ ಪಂದ್ಯದ ವೇಳೆ ಗಾಯಗೊಂಡು ಪೆವಿಲಿಯನ್ಗೆ ಮರಳಿದ್ದ ಮಿಷೆಲ್ ಮಾರ್ಷ್ ಬ್ಯಾಟಿಂಗ್ ಬಂದು ಅಚ್ಚರಿ ಮೂಡಿಸಿದರಾದರೂ, ಶಿವಂ ದುಬೆ ಎಸೆದ 19 ಓವರ್ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು. ಕೊನೆಯ ಓವರ್ 4ನೇ ಎಸೆತದಲ್ಲಿ ಸಂದೀಪ್ ಶರ್ಮಾ ಔಟಾಗುವುದರೊಂದಿಗೆ ಹೈದರಾಬಾದ್ ತಂಡ ಇನ್ನು 2 ಎಸೆತಗಳಿರುವಂತೆಯೇ 153 ರನ್ಗಳಿಗೆ ಸರ್ವಪತನಗೊಂಡು 10 ರನ್ಗಳ ಸೋಲುಂಡಿತು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯಜುವೇಂದ್ರ ಚಹಾಲ್ 19 ರನ್ ನೀಡಿ 3 ವಿಕೆಟ್ ಪಡೆದರೆ, ಸೈನಿ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರು. ಡೇಲ್ ಸ್ಟೈನ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ಯುವ ಆಟಗಾರ ದೇವದತ್ ಪಡಿಕ್ಕಲ್(56) ಹಾಗೂ ವಿಲಿಯರ್ಸ್ (51) ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ಗಳಿಸಿತ್ತು.
4 ಓವರ್ಗಳಲ್ಲಿ 19 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದ ಯುಜುವೇಂದ್ರ ಚಹಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.