ಹೈದರಾಬಾದ್:ಮುಂಬರುವ ಅವೃತ್ತಿಯ ಐಪಿಎಲ್ಗೆ ಸಂಬಂಧಿಸಿದಂತೆ ಆಟಗಾರರ ಕೊಡುಕೊಳ್ಳುವಿಕೆ ನಡೆಯುತ್ತಿದ್ದು, ಇದೇ ವೇಳೆ ರಾಜಸ್ಥಾನ ರಾಯಲ್ಸ್ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ.
ಕೊಹ್ಲಿ, ಎಬಿಡಿ ಖರೀದಿಗೆ 'ರಾಯಲ್ಸ್' ಉತ್ಸುಕ... ಆರ್ಸಿಬಿ ಉತ್ತರ ಏನ್ ಗೊತ್ತಾ? - ಆರ್ಸಿಬಿ ಟ್ವೀಟ್
ಐಪಿಎಲ್ 2020ರ ಆಟಗಾರರ ಖರೀದಿ ವಿಚಾರದ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡ ಕೊಹ್ಲಿ ಮತ್ತು ಎಬಿಡಿ ಬಗ್ಗೆ ಮಾಡಿರುವ ಟ್ವೀಟ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಕಳೆದ ಕೆಲ ದಿನಗಳಿಂದ ವಿವಿಧ ಪ್ರಾಂಚೈಸಿಗಳು ಆಟಗಾರರ ಖರೀದಿ ಹಾಗೂ ರಿಲೀಸ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿವೆ. ಸದ್ಯ ರಾಜಸ್ಥಾನ ರಾಯಲ್ಸ್, ಆರ್ಸಿಬಿ ತಂಡದಲ್ಲಿರುವ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಕಣ್ಣಿಟ್ಟಿದ್ದು, ನಮಗೆ ನೀಡುತ್ತೀರಾ ಎಂದು ಆರ್ಸಿಬಿ ಬಳಿ ಕೇಳಿದೆ.
ರಾಜಸ್ಥಾನ ರಾಯಲ್ಸ್ ತಂಡದ ಈ ಮನವಿಗೆ ಆರ್ಸಿಬಿ ಸಹ ಹಾಸ್ಯಭರಿತವಾಗಿ ಉತ್ತರಿಸಿದೆ. ಆರ್ಸಿಬಿ ಇನ್ಸೈಡರ್ ಶೋ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಮಿ.ನ್ಯಾಗ್ಸ್ರನ್ನು ನೀಡುತ್ತೇವೆ. ಅವರು ಮತ್ತೆ ನಮ್ಮ ತಂಡಕ್ಕೆ ಮರಳುವ ದಾರಿಯನ್ನು ತಿಳಿದಿದ್ದಾರೆ ಎಂದು ರಾಯಲ್ಸ್ಗೆ ಫನ್ನಿಯಾಗಿ ಉತ್ತರಿಸಿದೆ.