ಮುಂಬೈ: ಕಮ್ ಬ್ಯಾಕ್ ಹೀರೋ ಸುರೇಶ್ ರೈನಾ ಅಬ್ಬರದ ಅರ್ಧಶತಕದ ನೆರವಿನಿಂದ ಐಪಿಎಲ್ನ 2ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ತಂಡಕ್ಕೆ ಗೆಲ್ಲಲು 188 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇಳಿದು ಕೇವಲ 7 ರನ್ಗಳಾಗುವಷ್ಟರಲ್ಲಿ ಆರಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು.
ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಮೊಯೀನ್ ಅಲಿ ಮತ್ತು ಸುರೇಶ್ ರೈನಾ 53 ರನ್ಗಳ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿದ್ದ ಮೊಯೀನ್ ಅಲಿ, ಅಶ್ವಿನ್ ಓವರ್ನಲ್ಲಿ ಬ್ಯಾಕ್ ಬ್ಯಾಕ್ ಸಿಕ್ಸರ್ ಬಾರಿಸಿ, ನಂತರದ ಎಸೆತದಲ್ಲೇ ಕ್ಯಾಚ್ ಔಟ್ ಆದರು. ನಂತರ ಬಂದ ರಾಯುಡು 16 ಎಸೆತಗಳಲ್ಲಿ 23 ರನ್ಗಳಿಸಿ ಔಟಾದರು.